ಜಿಲ್ಲೆ

ದಾಂಡೇಲಿ: ಮನೆಗಳಿಗೆ ತುಂಬಿದ ಚರಂಡಿ ನೀರು

Uttara Kannada - Subash Hegde

ದಾಂಡೇಲಿ: ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಲಿಂಕ್ ರಸ್ತೆ ಮನೆಯೊಳಗೆ ಬುಧವಾರ ಮತ್ತೆ ಗಟಾರದ ತ್ಯಾಜ್ಯ ನೀರು ನುಗ್ಗಿ ಸಮಸ್ಯೆಯಾಗಿದ್ದು, ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಅಪ್ಪಾಕ್ ಶೇಖ, ಸದಸ್ಯರಾದ ಬುದವಂತಗೌಡ ಪಾಟೀಲ, ಪದ್ಮಜಾ ಪ್ರವೀಣ್ ಜನ್ನು ಮತ್ತು ಪೌರಾಯುಕ್ತ ವಿವೇಕ ಬನ್ನೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲಿಂಕ್ ರಸ್ತೆ ನಿವಾಸಿ ವೆಂಕಟೇಶ ಪಗಡೆ ಎಂಬವರ ಮನೆಗೆ ಮತ್ತು ಪಕ್ಕದಲ್ಲಿರುವ ಸಂತೋಷ ಹೋಟೆಲಿನ ಕೆಳ ಅಂತಸ್ತಿನೊಳಗೆ ಮತ್ತೆ ನೀರು ನುಗ್ಗಿದ್ದು, ಈ ನಿಟ್ಟಿನಲ್ಲಿ ನಗರಸಭೆ ಅಶ್ಪಾಕ್ ಶೇಖ, ಪೌರಾಯುಕ್ತ ವಿವೇಕ ಬನ್ನೆ ಸಿಬ್ಬಂದಿ ಜತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಧ್ಯಕ್ಷ ಇಲ್ಲಿ ಕಳೆದ ಕೆಲ ದಿನಗಳಿಂದ ಸಮಸ್ಯೆ ನಿವಾರಣೆಗಾಗಿ ನಗರಸಭೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ರಸ್ತೆ ಪಕ್ಕದಲ್ಲಿ ಇನ್ನೊಂದೆಡೆ ಮಳಿಗೆಯೊಂದರ ಕೆಳಭಾಗದಲ್ಲಿ ನೀರುಸರಾಗವಾಗಿ ಹರಿಯಲಾಗದೆ ಈ ಸಮಸ್ಯೆ ಉದ್ಭವವಾಗಿದೆ ಅಂದಾಜಿಸಲಾಗಿದೆ. ನಾಲಾದ ಎಂದು ಮೇಲ್ಗಡೆಯಿರುವ ಮಳಿಗೆಯನ್ನು ಸದ್ಯಕ್ಕೆ ತೆರವುಗೊಳಿಸಿ, ನಾಲಾದಲ್ಲಿ ತ್ಯಾಜ್ಯ ನೀರು ಹಾಗೂ ಮಳೆ ನೀರು ಸರಾಗವಾಗಿ ಹರಿಯದಂತೆ ಬ್ಲಾಕ್ನಾಲಾದ ಆಗಿರುವುದನ್ನು ಸರಿಪಡಿಸಿ, ಮೇಲ್ಗಡೆ ಸಿಮೆಂಟ್ ಕಾಂಕ್ರಿಟ್ ಮಾಡಿದ ನಂತರ ಮಳಿಗೆ ಸಿದ್ಧಪಡಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಗರಸಭೆ ಅಧಿಕಾರಿ ಶುಭಂ ರಾಯ್ಕರ್, ಆರೋಗ್ಯ ನಿರೀಕ್ಷಕ ಎಲಾಸ್ ಮೊದಲಾದವರು ಇದ್ದರು.