ತಿಪಟೂರು: ನಗರದ ಅವಾನಿಕೆರೆಯ ತೂಬಿನಿಂದ ಶನಿವಾರ ಇಡೀ ದಿನ ಅಪಾರ ಪ್ರಮಾಣದದಲ್ಲಿ ನೀರು ಸೋರಿಕೆಯಾಗಿದೆ, ನೀರು ರಾಷ್ಟ್ರೀಯ ಹೆದ್ದಾರಿ 206 ಮೇಲೆ ಹರಿದಿದ್ದರಿಂದ ಪಟ್ಟಣದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಕೆರೆಗೆ ಹೇಮಾವತಿ ನೀರು ಬಿಡಲಾಗಿದೆ, ಮಳೆಯಿಂದಲೂ ಒಳಹರಿವು ಹೆಚ್ಚಿದೆ, ಆದರೆ ತೂಬು ಮುಚ್ಚದ ಪರಿಣಾಮ, ನೀರು ಹೆದ್ದಾರಿಯಲ್ಲಿ ಬದಿ ಹೋಗಿರುವ ಯುಜಿಡಿ ಪೈಪ್‌ಲೈನ್ ಸೇರಿದೆ, ಬಳಿಕ ರಭಸಕ್ಕೆ ಮ್ಯಾನ್‌ಹೋಲ್ ಮುಚ್ಚಳ ಕಿತ್ತು, ಕೆರೆ ನೀರಿನ ಜತೆಗೆ ಕೊಳಚೆಯೂ ಹೆದ್ದಾರಿಗೆ ನುಗ್ಗಿದೆ.
ಶನಿವಾರ ರಜಾ ದಿನವಾಗಿದ್ದರೂ ಸಿಬ್ಬಂದಿ ಒಟ್ಟುಗೂಡಿಸಿದ ನಗರಾಯುಕ್ತ ಉವಾಕಾಂತ್, ತಡರಾತ್ರಿವರೆಗೂ ನೀರಿನ ಸೋರಿಕೆ ತಡೆಗಟ್ಟಲು ಪ್ರಯತ್ನಿಸಿದ್ದು, ಭಾನುವಾರ ಬೆಳಗಿನ ವೇಳೆಗೆ ಸೋರಿಕೆ ಹತೋಟಿಗೆ ಬಂದಿದೆ. ತೂಬಿಗೆ ಅಳವಡಿಸಿದ್ದ ಕಬ್ಬಿಣದ ಶೀಟ್ ತುಕ್ಕು ಹಿಡಿದಿದ್ದರಿಂದ ಹೊಸ ಕಬ್ಬಿಣದ ಶೀಟ್ ಅಳವಡಿಸಲಾಗಿದೆ, ತೂಬಿನ ಇನ್ನೊಂದು ಬದಿಗೆ ಮರಳಿನ ಮೂಟೆಗಳು ಪೇರಿಸಿ ಸೋರಿಕೆ ತಡೆಗಟ್ಟುವ ಪ್ರಯತ್ನವನ್ನು ನಡೆಸಿದ್ದು, ಭಾನುವಾರ ಕೂಡ ದುರಸ್ತಿ ಕಾರ್ಯ ಮುಂದುವರಿಯಿತು.
ಕೆರೆ ಭರ್ತಿ : ನಗರದ ಅವಾನಿಕೆರೆಗೆ ಸಮೀಪದ ಕೊಪ್ಪದಲ್ಲಿ ನಿರ್ಮಿಸಲಾಗಿರುವ ಜಾಕ್‌ವೆಲ್ (ಏತ ನೀರಾವರಿ) ಘಟಕದ ಪೈಪ್‌ಲೈನ್ ಮೂಲಕ ಹೇವಾವತಿ ನೀರನ್ನು ಹರಿಸಲಾಗುತ್ತದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದ ಪರಿಣಾಮ, ಮಳೆನೀರು ಕೆರೆ ಸೇರಲಿ ಎಂಬ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರಿನ ತೂಬಿನ ಕಬ್ಬಿಣದ ಶೀಟ್ ಕತ್ತರಿಸಲಾಗಿತ್ತು. ಹೀಗಾಗಿ ಅಗಾಧ ಪ್ರವಾಣದ ಮಳೆನೀರು ಮತ್ತು ಹೇವಾವತಿ ನೀರಿನಿಂದ ನಿರೀಕ್ಷೆಗಿಂತ ಮುಂಚೆ ಕೆರೆ ಭರ್ತಿಯಾಗಿದೆ.
ತೂಬಿಗೆ ಅಳವಡಿಸಿದ್ದ ಹಳೇ ಕಬ್ಬಿಣದ ಶೀಟ್ ದುರಸ್ತಿ ಕಾಣದೆ ಹಾಳಾಗಿದೆ. ತಾತ್ಕಾಲಿಕವಾಗಿ ಹೊಸ ಶೀಟ್ ಅಳವಡಿಸಿ, ತಕ್ಷಣಕ್ಕೆ ನೀರಿನ ಸೋರಿಕೆ ನಿಲ್ಲಿಸುವ ಪ್ರಯತ್ನ ವಾಡಲಾಗುತ್ತಿದೆ. ಮುಂದೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಉಮಕಾಂತ್ ನಗರಾಯುಕ್ತರು. ತಿಪಟೂರು