ಜಿಲ್ಲೆ

ಅಸೋಗಾ ಸೇತುವೆ ಬ್ಲಾಕ್; ಕೃಷಿ ಜಮೀನಿಗೆ ನುಗ್ಗಿದ ನೀರು

ಮಂಜುನಾಥ ಕೋಳಿಗುಡ್ಡ


ಬೆಳಗಾವಿ: ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮರದ ದಿಮ್ಮಿಗಳಿಂದಾಗಿ ಅಸೋಗಾ ಸೇತುವೆ ಬ್ಲಾಕ್ ಆಗಿದೆ. ಪರಿಣಾಮ ಮಳೆ ನೀರು ಕೃಷಿ ಜಮೀನುಗಳಿಗೆ ನುಗ್ಗಿದೆ.
ಸಣ್ಣ ನೀರಾವರಿ ಇಲಾಖೆ  ಇಂಜಿನಿಯರ್ ಗಳು ಕೂಡಲೇ ಜೆಸಿಬಿ ಬಳಸಿ ಮರದ ದಿಮ್ಮಿಗಳನ್ನು ತೆಗೆಯಲು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಕೃಷಿ ಜಮೀನಲ್ಲಿರುವ ಎಲ್ಲ ಬೆಳೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಅಸೋಗಾ, ಭೋಸಗಾಳಿ, ಕುಟ್ಟಿನೋನಗರದ ರೈತರು ಆಗ್ರಹಿಸಿದ್ದಾರೆ.