ಇಂಡಿ ತಾಲೂಕಿನ ತೆಗ್ಗೆಳ್ಳಿ ಹತ್ತಿರ ಹಳ್ಳದಲ್ಲಿ ಹರಿಯುತ್ತಿರುವ ಕೃಷ್ಣಾ ಕಾಲುವೆ ನೀರು. 
ಜಿಲ್ಲೆ

ಭೀಮೆಗೆ ನೀರು ಹರಿವು

ಇಂಡಿ: ಕೃಷ್ಣಾ ಮುಖ್ಯ ಕಾಲುವೆಯಿಂದ ಭೀಮೆಗೆ ನೀರು ಹರಿಯ ಬಿಡಲಾಗಿದೆ. ಕೃಷ್ಣಾ ಕಾಲುವೆಯಿಂದ ತೆಗ್ಗೆಳ್ಳಿ ಹಳ್ಳ, ಮಾರ್ಸನಳ್ಳಿ, ಅರ್ಜುಣಗಿ, ಹಂಚನಾಳ, ಮಿರಗಿ ಹಳ್ಳಗಳಿಗೆ ನೀರು ಹರಿಯುತ್ತಿದೆ.

ನಂತರ ಮಿರಗಿ ಹಳ್ಳದಿಂದ ಭೀಮಾ ನದಿಗೆ ನೀರು ಸೇರುತ್ತದೆ.

ಈ ನೀರು ಜನ ಜಾನುವಾರು, ಗ್ರಾಮದ ಜನರು, ಅಡವಿ ವಸ್ತಿ ಜನರಿಗೆ ಕುಡಿಯಲು ಉಪಯೋಗವಾಗಲೆಂದು ಬಿಡಲಾಗಿದೆ ಎಂದು ಎಂದು ಕೆ.ಬಿ.ಜೆ.ಎನ್​.ಎಲ್​ ಅಧೀಕ್ಷಕ ಇಂಜಿನಿಯರ್​ ಮನೋಜಕುಮಾರ ಗಡಬಳ್ಳಿ ತಿಳಿದ್ದಾರೆ.