ಕುಶಾಲನಗರ: ಕುಶಾಲನಗರ ಪಟ್ಟಣದ ಕಾವೇರಿ ಜೆ.ಸಿ.ಐ ಸಂಸ್ಥೆಯ ವತಿಯಿಂದ ಕುಶಾಲನಗರ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಕಾವೇರಿ ಜೆಸಿಐ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜೇಸಿ ಜೆ.ಎಫ್.ಪಿ ಎಸ್.ಎನ್.ರಾಜೇಂದ್ರ ಅವರು ವಾಟರ್ ಫಿಲ್ಟರ್ ಅನ್ನು ಕೊಡುಗೆಯಾಗಿ ನೀಡಿದರು.
ಜೆಸಿಐ ಸಂಸ್ಥೆಯ ವತಿಯಿಂದ ಶನಿವಾರ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಜೇಸಿ ಎಸ್.ಎನ್.ರಾಜೇಂದ್ರ, ಶಾಲೆಯ ಮುಖ್ಯ ಶಿಕ್ಷಕ ಪಿ.ನವೀನ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೇಸಿ ಎಸ್.ಎನ್.ರಾಜೇಂದ್ರ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಜೆಸಿಐ ಸಂಸ್ಥೆಯ ಅಧ್ಯಕ್ಷೆ ತಂಬಂಡ ತೇಜ ದಿನೇಶ್ ಮಾತನಾಡಿ, ಜೇಸಿ ರಾಜೇಂದ್ರ ಅವರು ಮಕ್ಕಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ವಾಟರ್ ಫಿಲ್ಟರ್ ಒದಗಿಸಿರುವುದಕ್ಕೆ ಜೆಸಿಐ ಸಂಸ್ಥೆಯ ವತಿಯಿಂದ ಅಭಿನಂದನೆ ಸಲ್ಲಿಸಿದರು.
ಶಾಲೆಯ ಮುಖ್ಯ ಶಿಕ್ಷಕ ಪಿ.ನವೀನ್ ಕುಮಾರ್ ಮಾತನಾಡಿ, ಜೆಸಿಐ ನಂತಹ ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರಿ ಶಾಲೆಗಳ ಪ್ರಗತಿಗೆ ಪ್ರೋತ್ಸಾಹ ನೀಡುತ್ತಿರುವುದನ್ನು ಶ್ಲಾಘಿಸಿದರು.
ಜೆ.ಸಿ.ಐ.ಸಂಸ್ಥೆಯ ಕಾರ್ಯದರ್ಶಿ ಎ.ಸಿ.ಕಾವ್ಯಶ್ರೀ, ಜೇಸಿಗಳಾದ ಎಂ.ಜೆ.ರಜನೀಕಾಂತ್, ಬಿ.ಜಗದೀಶ್, ಶಿಕ್ಷಕರು ಇದ್ದರು.