ಜಿಲ್ಲೆ

ನೀರು ತುಂಬಿಸಲು ಹೋದ ವ್ಯಕ್ತಿ ವಿದ್ಯುತ್ ತಗುಲಿ ಸಾವು

Haveri - Kariyappa Aralikatti

ರಾಣೆಬೆನ್ನೂರ: ಮನೆಗೆ ನೀರು ತುಂಬಿಸಲು ಮಷಿನ್ ಆನ್ ಮಾಡಲು ಹೋದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಭಾನುವಾರ ನಡೆದಿದೆ.
ನಿಂಗಪ್ಪ ಹನುಮಪ್ಪ ಕೊಳ್ಳೇರ (60) ಮೃತ ವ್ಯಕ್ತಿ.
ಇವರು ಮನೆಯಲ್ಲಿ ನೀರು ತುಂಬಿಸಲು ಮಷಿನ್ ಆನ್ ಮಾಡಲು ಹೋದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.