ಜಯಪುರ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡದ ಒಳಗಡೆ ನೀರು ನುಗ್ಗಿದ್ದರಿಂದ ಕೆಸರುಮಯವಾಗಿರುವುದು. 
ಜಿಲ್ಲೆ

ಜಯಪುರದಲ್ಲಿ ಶಾಲೆಗೆ ನುಗ್ಗಿದ ನೀರು

ಎಸ್.ಎನ್.ರವೀಂದ್ರ

ಜಯಪುರ: ಪಟ್ಟಣದಲ್ಲಿ ಶನಿವಾರ ಧಾರಾಕಾರ ಮಳೆಯಾಯಿತು. ಭಾರಿ ಮಳೆಯಿಂದಾಗಿ ಹಲವೆಡೆ ಮಣ್ಣು ಕೊಚ್ಚಿಕೊಂಡು ಬಂದು ರಸ್ತೆ ಮೇಲೆ ಸಂಗ್ರಹವಾಗಿದ್ದರಿಂದ ರಸ್ತೆಗಳು ಕೆಸರುಮಯವಾಗಿವೆ.

ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ನೀರು ನುಗ್ಗಿದ್ದರಿಂದ ಶಾಲೆ ಕೆಸರು ಗುಂಡಿಯಂತಾಗಿದೆ.
ಮುಖ್ಯಶಿಕ್ಷಕರ ಕೊಠಡಿ, ಕಂಪ್ಯೂಟರ್ ಕೊಠಡಿ ಸೇರಿದಂತೆ ಹಲವು ಕೊಠಡಿಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಅತ್ತಿಕುಡಿಗೆ ಗ್ರಾಪಂ ಬಸರೀಕಟ್ಟೆಯಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಚರಂಡಿ ದುರಸ್ತಿ ಮಾಡದ ಗ್ರಾಪಂ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸರಿಕಟ್ಟೆ ಸುತ್ತಮುತ್ತ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜೆಜೆಎಂ ಕುಡಿಯುವ ನೀರು ಕಾಮಗಾರಿ ನಡೆಸಿದ ಗುತ್ತಿಗೆದಾರರು ಹಾಗೂ ಅತ್ತಿಕುಡಿಗೆ ಗ್ರಾಪಂ ಬೇಜವಾಬ್ದಾರಿತನದಿಂದಾಗಿ, ರಸ್ತೆಯ ನೀರು ಮನೆಗೆ ಹಾಗೂ ಅಂಗಡಿಗಳಿಗೆ ನುಗ್ಗಿದೆ. ಕೂಡಲೇ ಚರಂಡಿ ದುರಸ್ತಿ ಮಾಡಿಸಬೇಕು ಎಂದು ಡಿ.ಎಸ್.ಸತೀಶ್ ಒತ್ತಾಯಿಸಿದ್ದಾರೆ.