ಅಥಣಿ: ಜೀವಜಲ ಅತ್ಯಮೂಲ್ಯವಾದ ಸಂಪತ್ತು. ಪ್ರತಿಯೊಂದು ಜೀವಿಗೂ ಕುಡಿಯುವ ನೀರು ಬೇಕೇ ಬೇಕು. ಜೀವಜಲ ಮಲೀನವಾಗದಂತೆ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅಥಣಿಯ ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಸಾಲಮಂಟಪಿ ಹೇಳಿದರು.
ಪಟ್ಟಣದ ನ್ಯಾಯಾಧೀಶರ ವಸತಿ ಗಹದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಥಣಿ, ವಕೀಲರ ಸಂಘ ಅಥಣಿ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಈಚೆಗೆ ವಿಶ್ವಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅನೇಕ ಜಲಚರಗಳು ಜಲಮೂಲ ಅವಲಂಬಿಸಿವೆ. ನೀರನ್ನು ವ್ಯರ್ಥ ಮಾಡಬಾರದು ಎಂದರು.
ಅಥಣಿ ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ ಮಾತನಾಡಿ, ಅರಣ್ಯ ಬೆಳೆಸುವಲ್ಲಿ ಇಲಾಖೆ ನಿರಂತರ ಶ್ರಮಿಸುತ್ತಿದ್ದು, ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಕೆ. ರವಿಕುಮಾರ, ಪ್ರಭಾರಿ ಸಿವಿಲ್ ಮತ್ತು ಜೆ.ಎಂ.ಎ್.ಸಿ. ನ್ಯಾಯಾಧೀಶ ಎಚ್.ಓಂಕಾರಮೂರ್ತಿ, ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ಖೋಕಲೆ ಮಾತನಾಡಿದರು. ಸಹಾಯಕ ಸರ್ಕಾರಿ ಆಭಿಯೋಜಕ ಬಸಪ್ಪ ಕಾಂಬಳೆ, ವಕೀಲರ ಸಂಘದ ಉಪಾಧ್ಯಕ್ಷ ಬಸವರಾಜ ಡಂಗಿ, ಕಾರ್ಯದರ್ಶಿ ಎನ್.ಆರ್. ಯಕ್ಕಂಚಿ, ಆರ್.ಪಿ.ನಲವಡೆ, ಅಶೋಕ ಗುಡಿಮನಿ ಇತರರಿದ್ದರು.