ಬೆಂಗಳೂರು : ಕರ್ನಾಟಕಕ್ಕೆ ಎರಡನೇ ಆಕ್ಸಿಜನ್ ಎಕ್ಸ್ಪ್ರೆಸ್ ರೈಲು ಇಂದು ತಲುಪಿದೆ. ಈ ರೈಲು, ಒಡಿಶಾದ ಕಳಿಂಗನಗರದಿಂದ 120 ಎಂಟಿ ಲಿಖ್ವಿಡ್ ಮೆಡಿಕಲ್ ಆಕ್ಸಿಜನ್ ಹೊತ್ತು ತಂದಿದ್ದು, ಇಂದು ಬೆಳಗಿನ ಜಾವ ಬೆಂಗಳೂರಿಗೆ ತಲುಪಿದೆ. ಈ ಆಕ್ಸಿಜನ್ಅನ್ನು ರಾಜ್ಯದ ವಿವಿಧೆಡೆ ಕರೊನಾ ರೋಗಿಗಳ ಚಿಕಿತ್ಸೆಗೆ ಬಳಸಲಾಗುವುದು.
ಜಾರ್ಖಂಡ್ನ ಟಾಟಾನಗರದಿಂದ ಇನ್ನೂ 120 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ಹೊರಟಿರುವ ಕರ್ನಾಟಕದ ಮೂರನೇ ಆಕ್ಸಿಜನ್ ರೈಲು ಇಂದು ಸಾಯಂಕಾಲ ಬೆಂಗಳೂರು ತಲುಪಲಿದೆ ಎನ್ನಲಾಗಿದೆ. (ಏಜೆನ್ಸೀಸ್)