ಜಿಲ್ಲೆ

ಸ್ಕಾೃನ್ ಆಗದ ಕಸ ಸಂಗ್ರಹ ಕ್ಯೂಆರ್ ಕೋಡ್

Dakshina Kannada

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಪ್ರತಿ ದಿನದ ಕಸ ಸಂಗ್ರಹದ ಮೇಲೆ ನಿಗಾ ಇಡಲು ಮನೆಗಳು, ಅಪಾರ್ಟ್‌ಮೆಂಟ್, ಅಂಗಡಿಗಳು ಸೇರಿದಂತೆ ಕಟ್ಟಡಗಳಲ್ಲಿ ಅಳವಡಿಸಲಾದ ಬಹುತೇಕ ಕ್ಯೂಆರ್ ಕೋಡ್ ಸ್ಕಾೃನ್ ಆಗುತ್ತಿಲ್ಲ.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ದಿನ ಕಸ ಸಂಗ್ರಹಣೆ ಮಾಡಲಾಗುತ್ತಿದ್ದು, ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ನಗರದಲ್ಲಿ ಸುಮಾರು 68 ಸಾವಿರ ಕಟ್ಟಡಗಳಿಗೆ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ತ್ಯಾಜ್ಯ ಸಂಗ್ರಹದ ಬಳಿಕ ಈ ಕ್ಯೂ ಆರ್ ಕೋಡ್ ಸ್ಕಾೃನ್ ಮಾಡಲು ಪ್ರತಿ ಪೌರಕಾರ್ಮಿಕರಿಗೆ ಮೊಬೈಲ್ ಡಿವೈಸ್ ನೀಡಲಾಗಿದೆ. ಈ ಡಿವೈಸ್‌ನಲ್ಲಿ ವಾರ್ಡ್‌ವಾರು ವ್ಯಾಪ್ತಿಯನ್ನು ನಮೂದು ಮಾಡಲಾಗಿದ್ದು, ಆ ವ್ಯಾಪ್ತಿಯೊಳಗೆ ಮಾತ್ರ ಯಂತ್ರ ಕಾರ್ಯನಿರ್ವಹಿಸುತ್ತದೆ. ಆದರೆ, ಸದ್ಯ ಕೆಲವೊಂದು ವಾರ್ಡ್‌ಗಳಲ್ಲಿನ ತ್ಯಾಜ್ಯ ಸಂಗ್ರಹದಲ್ಲಿ ಪೌರಕಾರ್ಮಿಕರು ವ್ಯಾಪ್ತಿ ಬದಲಾವಣೆ ಮಾಡುವುದರಿಂದ ಆ ಯಂತ್ರದ ಮೂಲಕ ಎಲ್ಲ ವಾರ್ಡ್‌ಗಳಲ್ಲಿ ಸ್ಕಾೃನ್ ಮಾಡಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಸದ್ಯ 3 ಸಾವಿರ ಕಟ್ಟಡಗಳಲ್ಲಿರುವ ಕ್ಯೂ ಆರ್ ಕೋಡ್ ರೀಡ್ ಆದರೂ 1500 ಕಟ್ಟಡಗಳ ಮಾಹಿತಿ ಮಾತ್ರ ಸ್ಮಾರ್ಟ್‌ಸಿಟಿ ಕಮಾಂಡ್ ಕಂಟ್ರೋಲ್ ರೂಂ.ಗೆ ಲಭ್ಯವಾಗುತ್ತಿದೆ.

ಸದ್ಯ ವಾರ್ಡ್‌ವಾರು ಮಾಡಲಾಗಿದ ಕ್ಯೂಆರ್ ಕೋಡ್ ಸ್ಕಾೃನ್ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮಂಗಳೂರು ದಕ್ಷಿಣ ಮತ್ತು ಮಂಗಳೂರು ಉತ್ತರ ವ್ಯಾಪ್ತಿಗೆ ಒಳಪಡಿಸಲು ನಿರ್ಧರಿಸಲಾಗಿದೆ. ಬಳಿಕ ಈ ವ್ಯಾಪ್ತಿಯಲ್ಲಿ ಎಲ್ಲೇ ಹೋದರೂ ಕ್ಯೂಆರ್ ಕೋಡ್ ಸ್ಕಾ ್ಯನ್ ಆಗಲಿದೆ. ಸದ್ಯ ಎದುರಾಗಿರುವ ತಾಂತ್ರಿಕ ದೋಷವನ್ನು ಸರಿಪಡಿಸಲಾಗುತ್ತಿದೆ. ಮುಂದೆ ದಕ್ಷಿಣ ಮತ್ತು ಉತ್ತರ ವಾರ್ಡ್‌ಗಳಲ್ಲಿ ಪೌರಕಾರ್ಮಿಕರಿಗೆ 100 ಯಂತ್ರ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಕ್ಯೂ ಆರ್ ಕೋಡ್?: ಹಣಕಾಸಿನ ವ್ಯವಹಾರಗಳಿಗೆ ಆನ್‌ಲೈನ್ ಪೇಮೆಂಟ್‌ಗೆ ಬಳಸುವ ಕ್ಯೂಆರ್ ಕೋಡ್ ಮಾದರಿಯಲ್ಲಿ ಈ ಕೋಡ್ ಸಿದ್ಧಪಡಿಸಲಾಗಿದೆ. ತ್ಯಾಜ್ಯ ಉತ್ಪಾದನೆ ಕೇಂದ್ರಗಳಾದ ಮನೆ, ಹೋಟೆಲ್, ಅಪಾರ್ಟ್‌ಮೆಂಟ್, ಕಾಂಪ್ಲೆಕ್ಸ್, ಮಳಿಗೆಗಳು ಹಾಗೂ ವಿವಿಧ ಉದ್ಯಮಗಳ ಕಾಂಪೌಂಡ್‌ಗಳಿಗೆ ಕ್ಯೂ ಆರ್ ಕೋಡ್ ಅಂಟಿಸಲಾಗಿದೆ. ಕಸ ಸಂಗ್ರಹಿಸುವ ಪೌರ ಕಾರ್ಮಿಕರಿಗೆ ಕ್ಯೂಆರ್ ಕೋಡ್ ಸ್ಕಾ ್ಯನ್ ಮಾಡಲು ಪ್ರತ್ಯೇಕ ಯಂತ್ರ ನೀಡಲಾಗಿದೆ. ಅವರು ಸ್ಕಾ ್ಯನ್ ಮಾಡಿ ಆ ಮನೆಯಿಂದ ತ್ಯಾಜ್ಯ ಸಂಗ್ರಹಿಸುತ್ತಾರೆ. ಆಗ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾರ್ಯನಿವರ್ರ್ಹಿಸುತ್ತಿರುವ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ಗೆ ಈ ಸಂದೇಶ ರವಾನೆಯಾಗುತ್ತದೆ. ಸೆಂಟರ್‌ನಲ್ಲಿರುವ ಅಧಿಕಾರಿ, ಸಿಬ್ಬಂದಿ ಇದನ್ನು ಗಮನಿಸುತ್ತಾರೆ. ಒಂದು ವೇಳೆ ಕ್ಯೂಆರ್ ಕೋಡ್ ಸ್ಕಾ ್ಯನ್ ಮಾಡದೇ ಇದ್ದರೆ ಆ ಮನೆಯಿಂದ ಕಸ ಸಂಗ್ರಹಿಸಿಲ್ಲವೆಂದು ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಹೋಗುತ್ತದೆ. ಒಂದು ವೇಳೆ ಕಸ ಸಂಗ್ರಹ ಮಾಡದಿದ್ದರೆ ಸಾರ್ವಜನಿಕರು ಕೂಡ ಮೊಬೈಲ್ ಮುಖೇನ ಈ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿ ದೂರು ನೀಡಬಹುದಾಗಿದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಮೇಲೆ ನಿಗಾ ಇಡುವ ಉದ್ದೇಶದಿಂದ ನಗರದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ತಾಂತ್ರಿಕ ತೊಂದರೆಯಿಂದಾಗಿ ಕೆಲವೊಂದು ಕ್ಯೂಆರ್ ಕೋಡ್ ಸ್ಕಾೃನ್ ಆಗುತ್ತಿರಲಿಲ್ಲ. ಅದನ್ನು ಸರಿಪಡಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯ ಬಹುತೇಕ ಸರಿಯಾಗಿದೆ.

ಅರುಣ್ ಪ್ರಭ, ಜನರಲ್ ಮ್ಯಾನೇಜರ್, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್