ಕಕಮರಿ: ಗ್ರಾಮದ ರೈತರ ಹೊಲಗಳಲ್ಲಿ ಹಾನಿಯಾಗಿರುವ ತೊಗರಿ ಬೆಳೆಯನ್ನು ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಬುಧವಾರ ಪರಿಶೀಲಿಸಿದರು.
ರೈತ ಸಂಪರ್ಕ ಕೇಂದ್ರದ ಮೂಲಕ ಸರ್ಕಾರ ವಿತರಿಸಿದ ತೊಗರಿ ಬೀಜ ಕಳಪೆಯಾಗಿವೆ. ಬಿತ್ತನೆ ಬಳಿಕ ಸಮರ್ಪಕ ಮಳೆಯಾಗದಿರುವುದು ಹಾಗೂ ಹವಾಮಾನ ವೈಪರೀತ್ಯದಿಂದ ತೊಗರಿ ಬೆಳೆ ಹೂ ಮತ್ತು ಕುಡಿ ಉದುರಿ ಹೋಗಿದೆ. ಕೂಡಲೇ ಪರಿಹಾರ ವಿತರಿಸಬೇಕೆಂದು ರೈತರು ಒತ್ತಾಯಿಸಿರು.
ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ಮಾತನಾಡಿ, ಗ್ರಾಮದಲ್ಲಿ ಬಿತ್ತನೆ ಮಾಡಿದ ಜಿಆರ್‌ಜಿ-152 ತೊಗರಿ ಬೀಜ ಬೆಳೆಯದೆ ಹಾನಿಯಾಗಿರುವುದನ್ನು ಪರಿಶೀಲಿಸಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಶ್ರೀಶೈಲ ಜನಗೌಡ, ಜಿಪಂ ಮಾಜಿ ಸದಸ್ಯ ಗುರಪ್ಪ ದಾಶ್ಯಾಳ, ಶ್ರೀ ಅಮ್ಮಾಜೇಶ್ವರಿ ಪಿಕೆಪಿಎಸ್ ಸಿಇಒ ಮಲ್ಲಿಕಾರ್ಜುನ ಜನಗೌಡ, ಲಾಯಪ್ಪ ಬಸರಗಿ, ಈರಪ್ಪ ತಂಗಡಿ, ಸಂಗಯ್ಯ ಹಿರೇಮಠ, ಶಂಕರ ಮಡಿವಾಳ, ಅಶೋಕ ಮಲಾಬದಿ, ಅಶೋಕ ಮರನೂರ ಇತರರಿದ್ದರು.