ಜವಳಗೇರಾ ಹತ್ತಿರದ ರಾಷ್ಟ್ರೀಯ ಸೀಡ್ಸ್ ಕಾರ್ಪೊರೇಷನ್ ಸೆಂಟ್ರಲ್ ಸ್ಟೇಟ್ ಫಾರಂನಲ್ಲಿ ಮಂಗಳವಾರ 77ನೇ ಸ್ವಾತಂತ್ರೊೃೀತ್ಸವ ಧ್ವಜಾರೋಹಣವನ್ನು ಫಾರಂನ ಕೃಷಿ ನಿರ್ದೇಶಕ ಕೃಷ್ಣಕುಮಾರ ಚೌಹ್ಹಾಣ ನೆರವೇರಿಸಿದರು. ಫಾರಂನ ಸೂಪರಿಡೆಂಟ್ ಬಿ.ಅರುಣಕುಮಾರ, ಇಂಜಿನಿಯರ್ ಚೇತನ್, ಅಕೌಂಟೆಂಟ್ ಅಲ್ಲಾಸಾಬ್ ಇದ್ದರು. 
ಜಿಲ್ಲೆ

ಹೋರಾಟಗಾರರ ಬದುಕು ಆದರ್ಶವಾಗಲಿ: ಕೃಷಿ ನಿರ್ದೇಶಕ ಕೃಷ್ಣಕುಮಾರ ಚೌಹ್ಹಾಣ ಹೇಳಿಕೆ

Gangavati - Desk - Veeresh S Ullagaddi

ಸಿಂಧನೂರು: ಇಂದಿನ ಯುವ ಪೀಳಿಗೆ ದೇಶಪ್ರೇಮ ಮೂಡಿಸಿಕೊಂಡು ದೇಶದ ಹಿತಕ್ಕಾಗಿ ಪ್ರಾಮಾಣಿಕವಾಗಿ ಶ್ರಮವಹಿಸುವ ಪ್ರತಿಜ್ಞೆ ಮಾಡಬೇಕೆಂದು ರಾಷ್ಟ್ರೀಯ ಸೀಡ್ಸ್ ಕಾರ್ಪೊರೇಷನ್ ಸೆಂಟ್ರಲ್ ಸ್ಟೇಟ್ ಫಾರಂನ ಕೃಷಿ ನಿರ್ದೇಶಕ ಕೃಷ್ಣಕುಮಾರ ಚೌಹ್ಹಾಣ ಹೇಳಿದರು.


ತಾಲೂಕಿನ ಜವಳಗೇರಾ ಹತ್ತಿರದ ರಾಷ್ಟ್ರೀಯ ಸೀಡ್ಸ್ ಕಾರ್ಪೊರೇಷನ್ ಸೆಂಟ್ರಲ್ ಸ್ಟೇಟ್ ಫಾರಂನಲ್ಲಿ ಮಂಗಳವಾರ 77ನೇ ಸ್ವಾತಂತ್ರೊೃೀತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅನೇಕ ಹೋರಾಟಗಾರರ ಪರಿಶ್ರಮದಿಂದ ನಾವು ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿದ್ದೇವೆ. ನಮಗೆ ಸ್ವಾತಂತ್ರೃ ಹೋರಾಟಗಾರರ ಬದುಕು, ದೇಶ ಪ್ರೇಮ, ದೇಶ ಭಕ್ತಿ ಆದರ್ಶವಾಗಬೇಕು. ಸಿಎಸ್‌ಎಫ್ ಸಿಬ್ಬಂದಿ ಪರಿಶ್ರಮದಿಂದ ಕಳೆದ ಆರ್ಥಿಕ ವರ್ಷ 3.5 ಕೋಟಿ ರೂ. ಲಾಭಗಳಿಸಿದೆ. ಮುಂದಿನ ವರ್ಷ ಲಾಭವನ್ನು ದ್ವಿಗುಣಗೊಳಿಸಲು ಸಿಬ್ಬಂದಿಯನ್ನು ಪ್ರೇರೇಪಿಸಿದರು.


ಮುಖ್ಯಶಿಕ್ಷಕಿ ಮಹೇಶ್ವರಮ್ಮ, ನಾಸೀರ್, ಫಾರಂನ ಸೂಪರಿಡೆಂಟ್ ಬಿ.ಅರುಣಕುಮಾರ, ಇಂಜಿನಿಯರ್ ಚೇತನ್, ಅಕೌಂಟೆಂಟ್ ಅಲ್ಲಾಸಾಬ್, ಆಡಳಿತಾಧಿಕಾರಿ ಅಜ್ಮೀರ್‌ಅಲಿ, ಜಿಎಚ್‌ಪಿಎಸ್, ಜವಳಗೇರಾ ಮತ್ತು ಸಿಎಸ್‌ಎಫ್ ಶಿಬಿರ-2 ವಿದ್ಯಾರ್ಥಿಗಳು ಭಾಗವಹಿಸಿದ್ದರು.