ಜಿಲ್ಲೆ

ರೌಡಿಶೀಟರ್‌ಗಳಿಗೆ ಖಡಕ್ ವಾರ್ನಿಂಗ್

ಮಂಜುನಾಥ ಅಂಗಡಿ

ಧಾರವಾಡ: `ಕಾನೂನಿನ ಚೌಕಟ್ಟಿನೊಳಗೆ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಬೇಕು. ಅದನ್ನು ಬಿಟ್ಟು ಕಾನೂನು ಬಾಹಿರ ಚಟುವಟಿಕೆ ಮಾಡಿದರೆ ಸುಮ್ಮನೆ ಬಿಡುವುದಿಲ್ಲ'.
ಈ ರೀತಿ ನಗರದ ಶಹರ ಠಾಣೆಯ ಇನ್‌ಸ್ಪೆಕ್ಟರ್ ನಾಗೇಶ ಕಾಡದೇವರಮಠ ಅವರು ರೌಡಿಗಳಿಗೆ ಶನಿವಾರ ಎಚ್ಚರಿಕೆ ನೀಡಿದರು. ಶಹರ ಠಾಣೆ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆ ಮಾಡಿ ರೌಡಿ ಪಟ್ಟಿಯಲ್ಲಿರುವ ೩೮ ರೌಡಿಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ಕೊಟ್ಟರು.
ಗಣೇಶ ಚತುರ್ಥಿ ಸೇರಿ ಸಾಲುಸಾಲು ಹಬ್ಬಗಳು ಬರುತ್ತಿದ್ದು, ಈ ಸಂದರ್ಭದಲ್ಲಿ ಗದ್ದಲ- ಗಲಾಟೆ ಮÁಡಿದರೆ ಅಥವಾ ಪ್ರೋತ್ಸಾಹ ನೀಡಿದರೆ ಸುಮ್ಮನೆ ಬಿಡುವುದಿಲ್ಲ. ಕಾನೂನಾತ್ಮಕವಾಗಿ ಗಡೀಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.