ಇಂಡಿ ಪಟ್ಟಣದಲ್ಲಿನ ಟೆಂಗಳೆ ಅವರ ಗೋಡೌನ್​ಗೆ ಬೆಂಕಿ ತಗುಲಿ ಕೃಷಿಗೆ ಸಂಬಂಧಿಸಿ ವಸ್ತುಗಳು ಸುಟ್ಟಿರುವುದು. 
ಜಿಲ್ಲೆ

ಗೋದಾಮಿಗೆ ಬೆಂಕಿ

ಗಿರೀಶ ಸಗರ

ಇಂಡಿ: ಪಟ್ಟಣದಲ್ಲಿ ಭಾನುವಾರ ಶಾರ್ಟ್​ ಸಕ್ಯೂರ್ಟ್​ನಿಂದ ಗೋಡೌನ್​ವೊಂದಕ್ಕೆ ಬೆಂಕಿ ತಗುಲಿ ಕೃಷಿಗೆ ಸಂಬಂಧಿಸಿದ ಅಪಾರ ಮೌಲ್ಯದ ಡ್ರಿಪ್​ ಪೈಪುಗಳು, ಸ್ಪಿಂಕ್ಲರ್​ ಪೈಪುಗಳು ಸುಟ್ಟು ಕರಕಲಾಗಿವೆ.

ಪಟ್ಟಣದ ರೈಲು ನಿಲ್ದಾಣ ರಸ್ತೆಯಲ್ಲಿ ರಿಲಯನ್ಸ್​ ಪೆಟ್ರೋಪ್​ ಪಂಪ್​ ಹತ್ತಿರದ ಲಕ್ಷಿ$್ಮ ಶಶಿಧರ ಟೆಂಗಳೆ ಅವರ ಗೋಡೌನ್​ಗೆ ಬೆಂಕಿ ತಗುಲಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಈ ಕುರಿತು ಇಂಡಿ ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.