ಕುಕನೂರು ಪ್ರವಾಸಿ ಮಂದಿರದಲ್ಲಿ ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.  
ಜಿಲ್ಲೆ

ವಾರ್ಡ್‌ಗಳ ಸಮಸ್ಯೆ ನಿವಾರಣೆಗೆ ಕ್ರಮ

ರುದ್ರಪ್ಪ ವಾಲಿ

ಕುಕನೂರು: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪಪಂ ಸಾಮಾನ್ಯ ಸಭೆ ಮಂಗಳವಾರ ನಡೆಯಿತು.

ಪಪಂ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆದಿದ್ದು, ಕಾರ್ಯ ರೂಪಕ್ಕೆ ಬರುತ್ತಿಲ್ಲ ಎಂದು ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು.

ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ಮಾಡಿದ ಕೆಲವು ಕಾಮಗಾರಿ, ಕೆಲಸಗಳು ಹಾಗೇ ಉಳಿದಿವೆ. ಇದರ ಬಗ್ಗೆ ನಮ್ಮ ಕೆಲವು ವಾರ್ಡ್‌ಗಳಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ಶೌಚಗೃಹ ನೀರು ಇಲ್ಲದ ಇಂತಹ ಅನೇಕ ಸಮಸ್ಯೆಗಳು ಇವೆ ಎಂದರು.

ಪಪಂ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮಾತನಾಡಿ, ಕಳೆದ ಬಾರಿ ಕೆಲವು ತಾಂತ್ರಿಕ ಸಮಸ್ಯೆಯಿಂದ ಸಭೆಯಲ್ಲಿ ಚರ್ಚೆ ಮಾಡಿದರೂ ಕೆಲಸ ನಡೆದಿಲ್ಲ. ಈ ಬಾರಿ ಸದಸ್ಯರ ವಾರ್ಡ್‌ಗಳ ಸಮಸ್ಯೆಗಳನ್ನು ಹಂತ ಹಂತವಾಗಿ ಬಗ್ಗೆ ಹರಿಸಲಾಗುವುದು ಎಂದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ, ಹೊಸದಾಗಿ ಕೊರೆಯಿಸಿದ ಬೋರವೆಲ್‌ಗಳಿಗೆ ತ್ರಿಫೇಸ್ ವಿದ್ಯುತ್‌ಲೈನ್ ಅನುಮೊದನೆ, ಅಂಬೇಡ್ಕರ್ ಸಮುದಾಯ ಭವನಕ್ಕೆ ಕಾಂಪೌಂಡ್ ಕಾಮಗಾರಿ ಅನುಮೋದನೆ ಕುರಿತು, 10ನೇ ವಾರ್ಡ್‌ನಲ್ಲಿರುವ ಆರ್‌ಒ ಪ್ಲಾಂಟ್‌ನ್ನು ಗುದ್ನೇಪ್ಪನಮಠದ ಕಮೀಟಿವರಿಗೆ ನಿರ್ವಹಣೆ ಮಾಡುವ ಕುರಿತು, ಬಸವೇಶ್ವರ ವಾಣಿಜ್ಯ ಮಳಿಗೆ ಮುಂದುವರೆದ ಕಾಮಗಾರಿ, ಸಿ.ಎ ನಿವೇಶನಗಳ ಮಂಜೂರಾತಿ, ಬಸವೇಶ್ವರ ನಗರ ಮತ್ತು ಸಂಜಯನಗರ ಪಾರ್ಕ್ ಜಾಗೆ ಅತಿಕ್ರಮಣ ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು.

ಉಪಾಧ್ಯಕ್ಷ ಪ್ರಶಾಂತ ಆರುಬೆರಳ್ಳಿನ್, ಜೆಸ್ಕಾಂ ಎಇಇ ಎಂ.ನಾಗರಾಜ, ಸದಸ್ಯರಾದ ಸಿದ್ದು ಉಳ್ಳಾಗಡ್ಡಿ, ರಾಮಣ್ಣ ಬಂಕದಮನಿ, ಸಿರಾಜ ಕರಮುಡಿ, ಗಗನ್ ನೋಟಗಾರ, ಬಾಲಗಾಜ ಗಾಳಿ, ಜಗನ್ನಾಥ ಭೂವಿ, ಶಿವರಾಜಗೌಡ, ಲಕ್ಷ್ಮೀ ಸಬರದ, ಕವಿತಾ ಹೂಗಾರ, ರಾಧಾ ದೊಡ್ಡಮನಿ, ಮಲ್ಲು ಚೌಧರಿ, ನೂರುದ್ದೀನ್ ಗುಡಿಹಿಂದಲ್, ನೇತ್ರಾವತಿ ಮಾಲಗಿತ್ತಿ, ಮಂಜುನಾಥ ಕೋಳೂರು ಇತರರರಿದ್ದರು.