ಮೈಸೂರು: ವಾರ್ಡನ್‌ಗಳು ತಮ್ಮ ಮನಸ್ಥಿತಿ ಬದಲಾಯಿಸಿಕೊಂಡು ವ್ಯವಸ್ಥೆ ಮೆಚ್ಚುವ ಹಾಗೆ ಹಾಸ್ಟೆಲ್‌ಗಳನ್ನು ಸ್ವಚ್ಛವಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾದರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಸಿ.ಕೆ.ಜಗದೀಶ್‌ಕುಮಾರ್ ತಿಳಿಸಿದರು.
ನಗರದ ರಾಮಕೃಷ್ಣ ಆಶ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಗಳವಾರ ನಿಲಯಪಾಲಕರಿಗೆ ಹಮ್ಮಿಕೊಂಡಿದ್ದ ಪುನಶ್ಚೇತನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪುನಶ್ಚೇತನ ಕಾರ್ಯಾಗಾರ ನಡೆಯುತ್ತಿದ್ದು, ಕಾರ್ಯಾಗಾರದ ಉದ್ದೇಶ ಗೊತ್ತಿರುವುದನ್ನೇ ಪುನಶ್ಚೇತನಗೊಳಿಸುವುದಾಗಿದೆ. ಪಾಲಕರು ದೂರದ ಊರುಗಳಿಂದ ಮಕ್ಕಳನ್ನು ಹಾಸ್ಟೆಲ್‌ಗಳಿಗೆ ಸೇರಿಸಿರುತ್ತಾರೆ. ನೀವು ಮಕ್ಕಳನ್ನು ನಿಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ವಾರ್ಡನ್‌ಗಳು ಮತ್ತು ಅಡುಗೆಯವರು ಹೊಂದಾಣಿಕೆ ಮಾಡಿಕೊಂಡು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಹೋದರೆ, ಯಾವುದೇ ತೊಂದರೆ ಇಲ್ಲದೆ ಸಮರ್ಥವಾಗಿ ಕಾರ್ಯ ನಿಭಾಯಿಸಬಹುದು ಎಂದರು.
ನಿಲಯಪಾಲಕರು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಸಂಜೆ 4 ರಿಂದ 8 ಗಂಟೆವರೆಗೆ ಹಾಸ್ಟೆಲ್‌ನಲ್ಲಿರಬೇಕು. ಮೆನುಚಾರ್ಟ್ ಪ್ರಕಾರ ಊಟ ಕೊಡಬೇಕು. ಮಕ್ಕಳಿಗೆ ಓದುವ ವಾತಾವರಣ ಕಲ್ಪಿಸಿಕೊಡಬೇಕು. ಮನಪರಿವರ್ತನೆ ಮಾಡಬೇಕು. ಕುಡಿಯುವ ನೀರು, ಗ್ರಂಥಾಲಯ, ಶೌಚಗೃಹ ಚೆನ್ನಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ, ಚಾಮರಾಜನಗರ ಜಿಲ್ಲಾ ಅಧಿಕಾರಿ ವಿಶ್ವನಾಥ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮುನೀಂದ್ರಮ್ಮ, ನಿಲಯಪಾಲಕರಾದ ಚಂದ್ರಕಲಾ, ಸ್ವರ್ಣಲತಾ, ಸುಚೇಂದ್ರಕುಮಾರ್, ಕೃಷ್ಣೇಗೌಡ, ಸುಕನ್ಯಾ, ಪ್ರೇಮ್‌ಕುಮಾರ್, ಮೇಘನಾ, ಸತೀಶ್, ನಿಲಯಪಾಲಕರಾದ ಪರಶುರಾಂ, ಮಹಾಲಕ್ಷ್ಮೀ, ರಮ್ಯಾ, ವೀರಬಸಪ್ಪ, ಜಗದೀಶ್‌ಕೋರಿ, ಪೂರ್ಣಿಮಾ, ತಬ್ರಿಜ್‌ಉಲ್ಲಾಖಾನ್ ಇದ್ದರು.