ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ಹಮ್ಮಿಕೊಂಡಿದ್ದ ವಾರ್ಡ್ ಸಭೆಯಲ್ಲಿ ಪಿಡಿಒ ಲಕ್ಷ್ಮೀದೇವಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಲೋಕನಾಯ್ಕ, ಉಪಾಧ್ಯಕ್ಷೆ ಹನುಮವ್ವ, ಸದಸ್ಯರಾದ ಯಲ್ಲಮ್ಮ, ಹರೀಶ ಘಂಟಾ, ಹೇಮಣ್ಣ ಇತರರಿದ್ದರು.  
ಜಿಲ್ಲೆ

ಹಳ್ಳಿಗಳ ಅಭಿವೃದ್ಧಿಗೆ ನರೇಗಾ ವರದಾನ

ಗಂಗಾವತಿ: ಮುಂದಿನ ಆರ್ಥಿಕ ವರ್ಷದ ನರೇಗಾ ಕ್ರೀಯಾಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಲಾನುಭವಿಗಳು ಹೆಸರು ನೊಂದಣಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಪಂ ಪಿಡಿಒ ಲಕ್ಷ್ಮೀದೇವಿ ಹೇಳಿದರು.

ತಾಲೂಕಿನ ಸಂಗಾಪುರ ಗ್ರಾಪಂನಿಂದ ನರೇಗಾ ಯೋಜನೆ ಕುರಿತು ಗುರುವಾರ ಹಮ್ಮಿಕೊಂಡಿದ್ದ ವಾರ್ಡ್ ಸಭೆಯಲ್ಲಿ ಮಾತನಾಡಿದರು. ಕ್ರಿಯಾಯೋಜನೆ ತಯಾರಿಸಲಾಗುತ್ತಿದ್ದು, ಆಸ್ತಿ ಸೃಜನೆಗೆ ಅವಕಾಶವಿದೆ. ನರೇಗಾ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಈ ಯೋಜನೆಯಡಿ ವೈಯಕ್ತಿಕ, ಸಮುದಾಯಿಕ ಕಾಮಗಾರಿ ಕೈಗೊಳ್ಳಲು ಅವಕಾಶ ಇದೆ. 2025-26ನೇ ಆರ್ಥಿಕ ಸಾಲಿನ ಕ್ರಿಯಾಯೋಜನೆ ಸಿದ್ಧಪಡಿಸಲು ವಾರ್ಡ್ ಸಭೆ ಕರೆಯಲಾಗುತ್ತದೆ. ಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಹಿತಿ ನೀಡಬೇಕು ಎಂದರು.

ನರೇಗಾ ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿಗಳು ಹಾಗೂ ಸೌಲಭ್ಯಗಳ ಬಗ್ಗೆ ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಮಾಹಿತಿ ನೀಡಿದರು.

ಸಭೆಯಲ್ಲಿ ಜಾನುವಾರು ಶೆಡ್, ಸಿಸಿ ರಸ್ತೆ, ಚರಂಡಿ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಸಲ್ಲಿಕೆಯಾದವು. ಗ್ರಾಪಂ ಅಧ್ಯಕ್ಷೆ ಮಂಜುಳಾ ಲೋಕನಾಯ್ಕ, ಉಪಾಧ್ಯಕ್ಷೆ ಹನುಮವ್ವ, ಸದಸ್ಯರಾದ ಯಲ್ಲಮ್ಮ, ಹರೀಶ ಘಂಟಾ, ಹೇಮಣ್ಣ, ವೆಂಕಟೇಶ, ಕಾರ್ಯದರ್ಶಿ ಸರ್ವಮಂಗಳಾ, ಸಿಬ್ಬಂದಿ ಸುಮಿತ್ರಾ, ಗೋಪಾಲ, ಯಮನೂರಪ್ಪ, ನಿಂಗಪ್ಪ, ಪರಶುರಾಮ ಇತರರಿದ್ದರು.