ಕಾರವಾರ: ಹೊಸ ವಕ ಕಾಯ್ದೆ ಜಾರಿಯಾದರೆ ಉತ್ತರ ಕನ್ನಡದ 12 ಕ್ಕೂ ಅಽಕ ವಕ ಭೂಮಿಯ ವಿವಾದಗಳು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ವಿಚಾರಣೆಗೆ ಬರಲಿವೆ.
ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ -1995 ಕ್ಕೆ ತಿದ್ದುಪಡಿ ತಂದು ಉಮೀದ್ (ಯುಡಬ್ಲುಎಂಇಇಡಿ)ಎಂದು ಜಾರಿ ಮಾಡುತ್ತಿದೆ. ಇದುವರೆಗೆ ವಕ ಜಮೀನಿಗೆ ಸಂಬಂಧಿಸಿದ ಯಾವುದೇ ವಿವಾದಗಳಿದ್ದರೆ, ಅದನ್ನು ರಾಜ್ಯ ವಕ್ಪ ಬೋರ್ಡ್ ಸಿಇಒ ನೋಡಿಕೊಳ್ಳುತ್ತಿದ್ದರು. ನಂತರ ಅದನ್ನು ಆಯಾ ವಿಭಾಗಗಳಲ್ಲಿರುವ ವಕ್ಫ್ ಟ್ರಿಬ್ಯೂನಲ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿತ್ತು.
ಹೊಸ ಕಾಯ್ದೆಯಂತೆ ವಕ್ಫ್ ಜಮೀನು ವಿವಾದಗಳನ್ನು ಜಿಲ್ಲಾಽಕಾರಿಗಳು ಪರಿಹರಿಸಬಹುದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಶಿರಸಿ ಸೇರಿ ವಕ್ಫ್ ಆಸ್ತಿಗಳನ್ನು ಅತಿಕ್ರಮಣ ಮಾಡಿದ 12 ಪ್ರಕರಣಗಳು ಬೋರ್ಡ್ನ ಸಿಇಒ ಕಚೇರಿಯಲ್ಲಿವೆ. ಬೆಳಗಾವಿ ವಿಭಾಗದ ಟ್ರಿಬ್ಯೂನಲ್‌ನಲ್ಲಿ ಅವುಗಳ ವಿಚಾರಣೆ ನಡೆಯಬೇಕಿದೆ. ಆದರೆ, ಇದುವರೆಗೂ ಪ್ರಕರಣಗಳು ಬೆಳಗಾವಿ ಟ್ರಿಬ್ಯುನಲ್ ಹಂತ ತಲುಪಿಲ್ಲ ಎಂಬ ಮಾಹಿತಿ ಇದೆ. ಹೊಸ ಕಾಯ್ದೆ ಜಾರಿಯಾದರೆ, ಅವು ಜಿಲ್ಲಾಧಿಕಾರಿ ಅಂಗಳಕ್ಕೆ ವಿಚಾರಣೆಗೆ ಬರಬಹುದಾಗಿದೆ. ಭಟ್ಕಳದಲ್ಲಿ ಅತ್ಯಧಿಕ ವಕ್ಫ್ ಆಸ್ತಿ ದೇಶದಲ್ಲಿ ವಕ ಆಸ್ತಿಯ ಕಾಯ್ದೆಯ ವಿಚಾರ ಚರ್ಚೆಯಲ್ಲಿದೆ. ಹೊಸ ಕಾಯ್ದೆ ಜಾರಿ ವಿರೋಧಿಸಿ, ದೇಶದ ವಿವಿಧ ಭಾಗಗಳಂತೆ ಜಿಲ್ಲೆಯ ಭಟ್ಕಳದಲ್ಲೂ ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಹಾಗಿದ್ದರೆ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಷ್ಟಿದೆ ಎಂಬ ಕುತೂಹಲ ಸಹಜ. ಉತ್ತರ ಕನ್ನಡದಲ್ಲಿ ಒಟ್ಟು 1503 ವಕ್ಫ್ ಆಸ್ತಿಗಳಿದ್ದು, ಅದರಲ್ಲಿ 113 ಆಸ್ತಿಗಳು ಮಾತ್ರ ಗ್ರಾಮೀಣ ಭಾಗದಲ್ಲಿವೆ. ಉಳಿದ ಸುಮಾರು 1390 ಆಸ್ತಿಗಳು ಶಹರ ಭಾಗದಲ್ಲಿವೆ. ಒಟ್ಟಾರೆ ಆಸ್ತಿಗಳ ಪೈಕಿ 592 ಆಸ್ತಿಗಳು ಭಟ್ಕಳ ಶಹರ ಭಾಗದಲ್ಲೇ ಇವೆ. ಗ್ರಾಮೀಣ ಭಾಗದಲ್ಲಿರುವ 70 ಆಸ್ತಿಗಳ ಖಾತಾ ಬದಲಾವಣೆ ಕಾರ್ಯ ನಡೆದಿದೆ. ಇನ್ನೂ ಸುಮಾರು 43 ಆಸ್ತಿಗಳ ಖಾತಾ ಬದಲಾವಣೆ ಕಾರ್ಯ ನಡೆಯಬೇಕಿದೆ.
ವಕ್ಫ್ ಆಸ್ತಿಗಳನ್ನು ಸರ್ವೇ ಮಾಡಿ ಅವುಗಳ ಖಾತೆ ಸಂಖ್ಯೆಯನ್ನು ಅಪ್‌ಡೇಟ್ ಮಾಡುವ ಕಾರ್ಯವು ಗ್ರಾಮೀಣ ಭಾಗದಲ್ಲಿ ನಡೆದಿತ್ತು. ಮಸೀದಿಗಳು, ಅಥವಾ ಕೆಲವು ಮುಖಂಡರ ಹೆಸರಿಗೆ ಇದ್ದ ಆಸ್ತಿಗಳನ್ನು ವಕ್ಫ್ ಬೋರ್ಡ್ ಹೆಸರಿಗೆ ಖಾತಾ ಬದಲಾವಣೆ ಮಾಡುವ ಕಾರ್ಯವೂ ನಡೆದಿದೆ. 2019 ರಿಂದ 22 ರವರೆಗೆ ಬೇರೆ ಬೇರೆ ಮುಖಂಡರ ಹೆಸರಿಗೆ ಇದ್ದ 10 ಕ್ಕೂ ಹೆಚ್ಚು ಆಸ್ತಿಗಳನ್ನು ವಕ್ಫ್ ಹೆಸರಿಗೆ ಖಾತಾ ಬದಲಾವಣೆ ಮಾಡುವ ಕಾರ್ಯ ನಡೆದುರುವುದು ಗಮನಕ್ಕೆ ಬರುತ್ತದೆ. ಆದರೆ, ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಗದ್ದಲ ಎದ್ದ ನಂತರ, ಖಾತಾ ಬದಲಾವಣೆಯ ಎಲ್ಲ ಕಾರ್ಯಗಳೂ ಕೆಲ ತಿಂಗಳಿಂದ ಸ್ಥಗಿತ ಮಾಡಲಾಗಿದೆ ಎಂದು ವಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೈತರ ಜಮೀನು ವಕ್ಫ್ ಹೆಸರಿನಲ್ಲಿ ಇಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ.
ವಕ್ಫ್ ಆಸ್ತಿಗಳ ಕುರಿತು ಸದ್ಯ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ. ಇನ್ನು ವಕ್ಫ್ ಕಾಯ್ದೆ ಸೆಕ್ಷನ್ 52 ಅಡಿ ಸಿಇಒ ಅವರಲ್ಲಿ ದಾಖಲಾದ ಯಾವುದೇ ಪ್ರಕರಣಗಳು ಜಿಲ್ಲಾಧಿಕಾರಿ ಅಥವಾ ಟ್ರಿಬ್ಯೂನಲ್ ಹಂತಕ್ಕೆ ಬಂದಿಲ್ಲ. ಅಬ್ದುಲ್ ಖಯೂಮ್ ಜಿಲ್ಲಾ ವಕ್ಫ್ ಅಧಿಕಾರಿ