ಮಾನ್ವಿ: ಛತ್ರಪತಿ ಶಿವಾಜಿ ಅಧಿಕಾರಕ್ಕಾಗಿ ಹೋರಾಟ ನಡೆಸಲಿಲ್ಲ. ಹಿಂದುಗಳ ಅಸ್ತಿತ್ವಕ್ಕಾಗಿ ಜೀವನ ಮುಡಿಪಿಟ್ಟು ಸಾಮ್ರಾಜ್ಯ ನಿರ್ಮಿಸಲು ಶ್ರಮಿಸಿದರು ಎಂದು ಹಿಂದು ಜಾಗರಣೆ ವೇದಿಕೆ ಪ್ರಾಂತ ಸಹ ಸಂಯೋಜಕ ಶ್ರೀಕಾಂತ ಹೊಸಕೆರೆ ಹೇಳಿದರು.
ಇದನ್ನೂ ಓದಿ: ಶಿವಾಜಿ ಮಹಾರಾಜರ ತತ್ವಾದರ್ಶ ಅವಳವಡಿಕೊಳ್ಳಲಿ
ಪಟ್ಟಣದ ಟಿಎಪಿಸಿಎಂಸಿ ಆವರಣದಲ್ಲಿ ಭಾನುವಾರ ಛತ್ರಪತಿ ಶಿವಾಜಿ ಯುವಸೇನೆ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ 395ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ 10 ಅಡಿ ಭೂಮಿ ಅಗೆದರೆ ಶಿವಲಿಂಗ ದೊರೆಯುತ್ತದೆ. ಇದು ಸನಾತನ ಧರ್ಮದ ಆಚರಣೆಯನ್ನು ನಮಗೆ ತಿಳಿಸುತ್ತದೆ.
ಶಿವಾಜಿ ಬಾಲ್ಯದಿಂದಲೂ ಹಿಂದು ಧರ್ಮಕ್ಕಾಗಿ ಹೋರಾಟ ನಡೆಸಿ ಕೊನೆಯ 6 ವರ್ಷದ ಅವಧಿಯಲ್ಲಿ ಪಟ್ಟಾಭಿಷೇಕ ಹೊಂದಿದ್ದರು. ದೇಶದಲ್ಲಿ ಹಿಂದುಗಳ ಭೂಮಿಯನ್ನು ವಕ್ಫ್ ಕಾಯ್ದೆ ಹೆಸರಿನಲ್ಲಿ ಕಸಿದುಕೊಳ್ಳಲಾಗುತ್ತಿದೆ. ಗೋವುಗಳಿಗೆ ರಕ್ಷಣೆ ಇಲ್ಲವಾಗಿದೆ. ಭಾರತ ವಿಶ್ವದಲ್ಲಿ ಹಿಂದು ಧರ್ಮವನ್ನು ಹೊಂದಿದ ಏಕೈಕ ದೇಶ. ಇಲ್ಲಿ ಹಿಂದುತ್ವ ಉಳಿಸಿಕೊಳ್ಳಬೇಕಾಗಿದೆ. ಎಂದರು.
ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ, ಛತ್ರಪತಿ ಶಿವಾಜಿ ಯುವಸೇನೆ ತಾಲೂಕು ಅಧ್ಯಕ್ಷ ಬಸವನಗೌಡ ಆಲ್ದಾಳ, ವಿಜಯಕುಮಾರ ಇ. ಇದ್ದರು.