ಜಿಲ್ಲೆ

ಕುಂದಾನಗರಿಯಲ್ಲಿ ಕಲಾವಿದರಿಗಾಗಿ ಆಡಿಷನ್ ಭಾನುವಾರ

Belagavi - Ravi Arjun Gosavi

ಬೆಳಗಾವಿ :  ರಂಗಸಂಪದ ಬೆಳಗಾವಿ ಅವರಿಂದ ರಾಜೇಂದ್ರ ಕಾರಂತ ರಚಿಸಿದ ಮರಣ ಮೃದಂಗ ನಾಟಕ ಪ್ರದರ್ಶನದ ಪೂರ್ವ ತಯಾರಿ ನಡೆದಿದೆ. ಡಾ.ಅರವಿಂದ ಕುಲಕರ್ಣಿ ನಿರ್ದೇಶಿಸಲಿದ್ದು  ನಾಟಕದಲ್ಲಿ ಅಭಿನಯಿಸಲು ಇಚ್ಛಿಸುವ ಕಲಾವಿದರು ಆ.20ರಂದು ಭಾನುವಾರ  ಬೆಳಗ್ಗೆ  11.30ಕ್ಕೆ  ನಗರದಲ್ಲಿನ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಆಡಿಷನ್ ಆಯೋಜಿಸಲಾಗಿದೆ. ಆಸಕ್ತ ಕಲಾವಿದರು ಹೆಚ್ಚಿನ ಮಾಹಿತಿಗಾಗಿ  ಮೊ. ಸಂಖ್ಯೆ 9845025638 ಗೆ ಸಂಪರ್ಕಿಸಬೇಕು ಎಂದು  ರಂಗಸಂಪದದ ಕಾರ್ಯದರ್ಶಿ ಪ್ರಸಾದ ಕಾರಜೋಳ  ತಿಳಿಸಿದ್ದಾರೆ.