ಮೂಡಲಗಿ: ಕರೊನಾ ವೈರಸ್ ತಡೆಗಟ್ಟಲು ಸರ್ಕಾರ ವಿಧಿಸಿರುವ ಲಾಕ್‌ಡೌನ್ ನಿಯಮ ಉಲ್ಲಂಘಿಸುವವರಿಂದ ಪುರಸಭೆ ವಸೂಲಿ ಮಾಡುವ ದಂಡದ ಹಣದಲ್ಲಿ ಸಾರ್ವಜನಿಕರಿಗೆ ಉಚಿತ ಮಾಸ್ಕ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ತಿಳಿಸಿದ್ದಾರೆ.
ಮಾಸ್ಕ್ ಧರಿಸದೆ ಇರುವವರಿಗೆ 100 ರೂ. ದಂಡ ವಿಧಿಸುತ್ತಿದ್ದು, ಮಾಸ್ಕ್ ಧರಿಸದೇ ಇರುವವರಿಗೆ ಪುರಸಭೆಯಿಂದ ಉಚಿತವಾಗಿ ಮಾಸ್ಕ್ ನೀಡಲು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಸಲಹೆ ನೀಡಿದ್ದರು. ಸಲಹೆ ಉತ್ತಮವಾಗಿದ್ದು, ಅದೇ ದಂಡದ ಹಣದಲ್ಲಿ ಮಾಸ್ಕ್ ತಯಾರಿಸಿ ದಂಡ ವಿಧಿಸುವುದರೊಂದಿಗೆ ಉಚಿತ ಮಾಸ್ಕ್ ನೀಡಲು ಕ್ರಮ ಕೈಗೊಳ್ಳುವುದಾಗಿ ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.