ಜಿಲ್ಲೆ

ಮೇ 1ಕ್ಕೆ ವಾಕಥಾನ್: ವಿಆರ್​ಎಲ್​ ಮೀಡಿಯಾ ಸಹಯೋಗದಲ್ಲಿ ನವರತನ್ ಜ್ಯುವೆಲ್ಲರ್ಸ್ ಆಯೋಜನೆ

ಬೆಂಗಳೂರು: ಚಿನ್ನಾಭರಣ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ‘ನವರತನ್ ಜ್ಯುವೆಲ್ಲರ್ಸ್’ ಹಾಗೂ ವಿಆರ್​ಎಲ್ ಮೀಡಿಯಾ ಸಹಯೋಗದಲ್ಲಿ ಮೇ 1 ರಂದು ವಾರ್ಷಿಕ ಆರೋಗ್ಯ ಹೃದಯಕ್ಕಾಗಿ ವಾಕಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಇತ್ತೀಚೆಗೆ ಒತ್ತಡ, ಆಹಾರ ಪದ್ದತಿ ಸೇರಿ ಇನ್ನೀತರ ಚಟುವಟಿಕೆಗಳಿಂದಾಗಿ ಯುವ ಪೀಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದೆ. ಈ ಹಿನ್ನೆಲೆಯಲ್ಲಿ ವಾಕ್​ಥಾನ್ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುವುದು. ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಅರಿವು ಮೂಡಿಸಲಾಗುವುದು ಎಂದು ‘ನವರತನ್ ಜ್ಯುವೆಲ್ಲರ್ಸ್’ನ ಉಪಾಧ್ಯಕ್ಷ ಅರುಣ್ ಕುಮಾರ್ ತಿಳಿಸಿದ್ದಾರೆ.

ಉಚಿತ ಆರೋಗ್ಯ ಶಿಬಿರ

ಮೇ1ರ ಬೆಳಗ್ಗೆ 6.30ರಿಂದ 8 ಗಂಟೆಯವರೆಗೆ ರಾಜಾಜಿನಗರದಲ್ಲಿರುವ ನವರತನ್ ಜುವೆಲರ್ಸ್ ನಿಂದ ವಾಕಥಾನ್ ಆರಂಭವಾಗಲಿದೆ. ಪೈಪ್​ಲೈನ್, ಶಂಕರಮಠ ವೃತ್ತ, ಮೋದಿ ಆಸ್ಪತ್ರೆ ರಸ್ತೆ ಮೂಲಕ ವೆಸ್ಟ್​ಆಫ್​ಕಾರ್ಡ್ ರಸ್ತೆಗೆ ಬಂದು ಪುನಃ ನವರತನ್ ಜ್ಯುವೆಲರ್ಸ್​ಗೆ ಬಂದು ಅಂತ್ಯಗೊಳ್ಳಲಿದೆ. ಲಘು ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಇದಾದ ಬಳಿಕ ಫೋರ್ಟಿಸ್ ಆಸ್ಪತ್ರೆಯ ಸಹಯೋಗದೊಂದಿಗೆ ರಾಜಾಜಿನಗರದಲ್ಲಿರುವ ನವರತನ್ ಜ್ಯುವೆಲರ್ಸ್​ನಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಇಸಿಜಿ, ಸಾಮಾನ್ಯ ಆರೋಗ್ಯ ಪರೀಕ್ಷೆ, ಬಿಪಿ, ಸಕ್ಕರೆ ಖಾಯಿಲೆ ಸೇರಿ ಇನ್ನಿತರ ಆರೋಗ್ಯ ಸಮಸ್ಯೆಗೆ ತಜ್ಞ ವೈದ್ಯರು ಪರಿಹಾರ ಸೂಚಿಸಲಿದ್ದಾರೆ ಎಂದು ಅರುಣ್​ಕುಮಾರ್ ತಿಳಿಸಿದ್ದಾರೆ.

ಸ್ಥಳ: ನವರತನ್ ಜ್ಯುವೆಲರ್ಸ್’, 120, 12ನೇ ಕ್ರಾಸ್, ವೆಸ್ಟ್​ಆಫ್ ಕಾರ್ಡ್ ರಸ್ತೆ, ರಾಜಾಜಿನಗರ 2ನೇ ಹಂತ. ಸಮಯ: ಬೆಳಗ್ಗೆ 6.30

ದೂರವಾಣಿ ಸಂಖ್ಯೆ: 080 23019400

ವಾಟ್ಸ್​ಆ್ಯಪ್​ ಸಂಖ್ಯೆ: 9742023322