ಜಿಲ್ಲೆ

ನಗರದಲ್ಲಿ ಗಮನ ಸೆಳೆದ ವಾಕಥಾನ್

ಪ್ರಸಿನ್ ಕೆ.ಆರ್

ಹಾಸನ: ನಗರದ ಇಂಡಿಯಾನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಹಾರ್ಟ್ ಸೆಂಟರ್ ವತಿಯಿಂದ ವಿಶ್ವ ಹೃದಯ ದಿನ ಅಂಗವಾಗಿ ನಗರದ ಡೇರಿ ವೃತ್ತದಿಂದ 3 ಕಿಲೋ ಮೀಟರ್ ವಾಕಥಾನ್ ಹಮ್ಮಿಕೊಳ್ಳಲಾಗಿತ್ತು.

ಇಂಡಿಯಾನಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ. ಎಂ.ಅನೂಪ್ ಮಾತನಾಡಿ, ಅನಿಯಂತ್ರಿತ ಜೀವನ ಶೈಲಿ, ವ್ಯಾಯಾಮದ ಕೊರತೆ, ಅತಿಯಾದ ಒತ್ತಡ, ಧೂಮಪಾನ, ಮದ್ಯಪಾನ ಮತ್ತು ಅಸಮರ್ಪಕ ಆಹಾರ ಪದ್ಧತಿ ಇವುಗಳೆಲ್ಲ ಹೃದಯ ರೋಗದ ಪ್ರಮುಖ ಕಾರಣಗಳು ಎಂದರು.

ಇಂತಹ ಸಂದರ್ಭದಲ್ಲಿ ಜನರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದರು. ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಹೃದಯದ ನಾಡಿಯನ್ನು ನೀವು ಅರಿತುಕೊಳ್ಳಿ. ಈ ಘೋಷವಾಕ್ಯದೊಂದಿಗೆ ಹೃದಯ ಆರೋಗ್ಯದ ಮಹತ್ವವನ್ನು ಸಾರುವ ಉದ್ದೇಶವಾಗಿದೆ ಎಂದು ಹೇಳಿದರು. ಡೇರಿ ವೃತ್ತದಿಂದ ರಿಂಗ್ ರೋಡ್ ಸಾಲಗಾಮೆ ವೃತ್ತದವರೆಗೆ ಮ್ಯಾರಥಾನ್ ಮತ್ತು ವಾಕಥಾನ್ ಹಮ್ಮಿಕೊಳ್ಳಲಾಗಿತ್ತು.

ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್, ಟೈಮ್ಸ್ ಗುರುಕುಲ ಕಾರ್ಯದರ್ಶಿ ಸುರೇಂದ್ರ, ರೋಟರಿ ಸುಧಾಕರ್, ಸಮೃದ್ಧಿ ಬ್ಯಾಂಕಿನ ಪಾರ್ಶನಾಥ್, ಕರಾವಳಿ ಸುರೇಂದ್ರ, ಐಎಂಎ ಅಧ್ಯಕ್ಷ ಡಾ. ಡಾಂಗೆ, ಶ್ರೀರಂಗ, ವಿವೇಕ್, ಇಂಡಿಯಾನ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಎಸ್.ಬಿ. ನಿರೂಪ್, ಆಸ್ಪತ್ರೆಯ ಆಡಳಿತಾಧಿಕಾರಿ ಪ್ರದೀಪ್ ಇತರರು ಇದ್ದರು.