ಮದರಕಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಂಬಾದೇವಿ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ನಿವೃತ್ತ ತಹಸೀಲ್ದಾರ್ ವೆಂಕನಗೌಡ ಪಾಟೀಲ್ ನವಿಲುಗುಡ್ಡ ಮಾತನಾಡಿದರು. ಅವಧೂತ ರಾಜಯೋಗಿ ಸಂತ ನಾಮದೇವಗೌಡ ಶರಣರು, ಗುಡದನಾಳ ಭೀಮಮ್ಮ ಅಕ್ಕಲಕೋಟೆ, ಮಹಾದೇವಪ್ಪ ಗೋರೆಬಾಳ, ಪದ್ಮಾವತಿ ಬಿ.ವಿ. ನಾಯಕ, ವಿ.ಎಂ.ಮೇಟಿ, ವೈ.ಎಂ.ನವಲಗುಂದ ಇತರರಿದ್ದರು. 
ಜಿಲ್ಲೆ

ಶರಣರ ದಾರಿಯಲ್ಲಿ ನಡೆಯಿರಿ

ನರೇಶ್ ಕುಮಾರ್

ಅರಕೇರಾ: ಶಿವಶರಣರು ಪ್ರತಿಪಾದಿಸಿದ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಪಾಲಕರು ಮಕ್ಕಳಲ್ಲಿ ಬಿತ್ತಿದಾಗ ಮಾತ್ರ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ನಿವೃತ್ತ ತಹಸೀಲ್ದಾರ್ ವೆಂಕನಗೌಡ ಪಾಟೀಲ್ ನವೀಲಗುಡ್ಡ ಹೇಳಿದರು.

ತಾಲೂಕಿನ ಮದರಕಲ್ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಬಾದೇವಿ ದಸರಾ ಮಹೋತ್ಸವದ ಅಂಗವಾಗಿ 501ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನ ಸಾಹಿತ್ಯದ ಉಳಿವಿಗಾಗಿ ಪಾದಯಾತ್ರೆ ನಡೆಸಿದಾಗ ಚನ್ನಬಸವಣ್ಣನವರು ಲಿಂಗಪೂಜೆ ಮಾಡಿದ ಪುಣ್ಯಕ್ಷೇತ್ರ ಮದರಕಲ್ ಗ್ರಾಮ. ಈ ಪವಿತ್ರ ನೆಲದ ಜನರು ಸದಾ ಶರಣರ ದಾರಿಯಲ್ಲಿ ನಡೆಯಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಅವಧೂತ ರಾಜಯೋಗಿ ಸಂತ ನಾಮದೇವಗೌಡ ಶರಣರು ಮಾತನಾಡಿ, ಆಚಾರ-ವಿಚಾರ, ನಡೆ-ನುಡಿ ಶುದ್ಧವಾಗಿದ್ದರೆ ದೇವರು ನೆಲೆಸುತ್ತಾನೆ. ಸರ್ವಧರ್ಮ ಸಮನ್ವಯ ಭಾವ ಎಲ್ಲರಲ್ಲೂ ಬೆಳೆಸುವುದು ಮುಖ್ಯ. ಗೌರವದಿಂದ ಬದುಕಿದಾಗ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಉನ್ನತಿ ಸಾಧ್ಯ ಎಂದರು.

ಪ್ರಮುಖರಾದ ಗುಡದನಾಳ ಭೀಮಮ್ಮ ಅಕ್ಕಲಕೋಟೆ, ಮಹಾದೇವಪ್ಪ ಗೊರೇಬಾಳ, ಪದ್ಮಾವತಿ ಬಿ.ವಿ. ನಾಯಕ, ವಿ.ಎಂ.ಮೇಟಿ, ವೈ.ಎಂ.ನವಲಗುಂದ, ಅಮರೇಶ ಪೊ.ಪಾ, ಶಿವಪ್ಪ ಪಕಲನಮರಡಿ, ಕರಿಯಪ್ಪ ಸೋಮರಡಿ, ಬಸವರಾಜ ರಾಮುಲು ಗಲಗ, ರಾಮಣ್ಣ ಸಿಂಧನೂರು, ಚನ್ನಬಸವ ಕಕ್ಕಲದೊಡ್ಡಿ, ದೇವಣ್ಣ ನಾಯಕ ಮಾಲಿಗೌಡ, ದುರುಗಪ್ಪ ಇತರರಿದ್ದರು.