ಹುಬ್ಬಳ್ಳಿ : ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೆೊತ್ಥಾನ ರಕ್ತ ಕೇಂದ್ರದಿಂದ ಜೂ. 14ರಂದು ಬೆಳಗ್ಗೆ 8 ಗಂಟೆಗೆ ನಗರದಲ್ಲಿ ಜಾಗೃತಿಗಾಗಿ ನಡಿಗೆ ಆಯೋಜಿಸಿದೆ.
ಮಜೇಥಿಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಚಾಲನೆ ನೀಡುವರು. ಶಾಸಕ ಮಹೇಶ ಟೆಂಗಿನಕಾಯಿ, ಸ್ವರ್ಣ ಜ್ಯುವೆಲರ್ಸ್ ನಿರ್ದೇಶಕ ಗೋಪಾಲಕೃಷ್ಣ ನಾಯಕ, ರಕ್ತ ಕೇಂದ್ರದ ಸಂಸ್ಥಾಪಕರಾದ ನಂದಕುಮಾರ ಎಚ್.ಎನ್., ಗೋವಿಂದ ಜೋಶಿ, ಬಾಲಾಜಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯ ಡಾ. ಕ್ರಾಂತಿ ಕಿರಣ, ಸ್ವರ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿ.ಎಸ್.ವಿ. ಪ್ರಸಾದ, ಡೆಪ್ಯೂಟಿ ಡ್ರಗ್ ಕಂಟ್ರೋಲರ್ ಬಸವರಾಜ ಅಸಂಗಿ, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನೀಲಕಂಠ ರಾಥೋಡ, ವಿವೇಕಾನಂದ ಆಸ್ಪತ್ರೆಯ ಮುಖ್ಯಸ್ಥ ಡಾ. ರಾಹುಲ ಮುಂಗೇಕರ, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ರಘುರಾಮ ಹಾಗೂ ಉದ್ಯಮಿ ವೀರೇಂದ್ರ ಛೇಡಾ ಅತಿಥಿಗಳಾಗಿ ಪಾಲ್ಗೊಳ್ಳುವರು.
ನೀಲಿಜಿನ್ ರಸ್ತೆಯ ರಕ್ತ ಕೇಂದ್ರದಿಂದ ಪ್ರಾರಂಭಗೊಳ್ಳುವ ಜಾಗೃತಿಗಾಗಿ ನಡಿಗೆ, ಹಳೇ ಕೋರ್ಟ್ ವೃತ್ತ, ಲ್ಯಾಮಿಂಗ್ಟನ್ ರಸ್ತೆ, ಚನ್ನಮ್ಮ ವೃತ್ತ, ಹಳೇ ಬಸ್ ನಿಲ್ದಾಣ, ನ್ಯೂ ಕಾಟನ್ ಮಾರ್ಕೆಟ್ ಮೂಲಕ ಮರಳಿ ರಕ್ತಕೇಂದ್ರಕ್ಕೆ ಆಗಮಿಸುವುದು.