ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯಲ್ಲಿ ಸಾಹಿತಿ ನರೇಂದ್ರ ಕುಮಾರ್ ಕೋಟ ನುಡಿನಮನಗೈದರು. 
ಜಿಲ್ಲೆ

ನಡೆ ನುಡಿ ಬದುಕಿಗೆ ಭದ್ರಬುನಾದಿ

ಕೋಟ: ಕಾರಂತರ ಬದುಕೆ ವಿಸ್ಮಯ ಅವರ ನೇರ ನಡೆ ನುಡಿ ಬದುಕಿನ ತಳಹದಿಗೆ ಭದ್ರಬುನಾದಿ. ಅವರ ಕಾದಂಬರಿಗಳು ನೈಜ ಜೀವನದ ಆಯಾಮ ತಿಳಿಸುವುದದರ ಜತೆಗೆ ಸಾಹಿತಿಕ ಪ್ರಕಾರಗಳಿಗೆ ಮುನ್ನುಡಿ ಬರೆದಿದೆ. ಅವರ ಪರಿಸರ ಪ್ರಜ್ಞೆ ವಿಚಾರಧಾರೆ ಮುಂದಿನ ತಲೆಮಾರಿನತ್ತ ಕೊಂಡ್ಯೊಯ್ಯಬೇಕಿದೆ ಎಂದು ಸಾಹಿತಿ ನರೇಂದ್ರ ಕುಮಾರ್ ಕೋಟ ಹೇಳಿದರು.

ಡಾ.ಕೋಟ ಶಿವರಾಮ ಕಾರಂತ ಸಂಶೋಧನ ಮತ್ತು ಅಧ್ಯಯನ ಟ್ರಸ್ಟ್ ಮಾನಸ ಸಾಲಿಗ್ರಾಮ, ಕಡಲ ತಡಿಯ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆಯಲ್ಲಿ ಗುರುವಾರ ನುಡಿ ನಮನ ಸಲ್ಲಿಸಿ ಮಾತನಾಡಿದರು.

ಅಧ್ಯಯನಕೇಂದ್ರದ ವಿಶ್ವಸ್ಥ ಮಂಡಳಿ ಪ್ರಮುಖ ಗುಜ್ಜಾಡಿ ಪ್ರಭಾಕರ್ ನಾಯಕ್ ಪ್ರಾಸ್ತಾವನೆ ಸಲ್ಲಿಸಿದರು. ಆಭರಣ ಜುವೆಲ್ಲರ್ಸ್ ಉಡುಪಿ ಆಡಳಿತ ನಿರ್ವಾಹಕ ನಿರ್ದೇಶಕ ಸುಭಾಸ್ ಎಂ.ಕಾಮತ್, ಮಹೇಶ್ ಎಂ.ಕಾಮತ್, ಸಂಧ್ಯಾ ಎಸ್.ಕಾಮತ್, ಬ್ರಹ್ಮಾವರ ಕಸಾಪ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್, ವಿಶ್ವಸ್ಥ ಮಂಡಳಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ವಿಶ್ವಸ್ಥ ಮಂಡಳಿ ಅಧ್ಯಕ್ಷ ಗುರುರಾಜ್ ಕೋಟೇಶ್ವರ ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ಆಚಾರ್ ವಂದಿಸಿದರು.