ಜಿಲ್ಲೆ

ಹುಬ್ಬಳ್ಳಿಯಲ್ಲಿ ವಾಕ್ ಎ ಮೈಲ್

Dharwada - Basavaraj Idli

ಹುಬ್ಬಳ್ಳಿ: ವಿಶ್ವ ಹೃದಯ ದಿನದ ಅಂಗವಾಗಿ ನಗರದ ಅಶೋಕ ಹಾಸ್ಪಿಟಲ್, ಸ್ವಾಸ್ಥ್ಯ ಹಾರ್ಟ್ ಹಾಗೂ ಕಿಡ್ನಿ ಕೇರ್ ಆಶ್ರಯದಲ್ಲಿ ಹಾಗೂ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್, ಮಹಾಗಣಪತಿ ಕಾಲೇಜ್ ಆಫ್ ನರ್ಸಿಂಗ್, ಅಶೋಕ ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಸಹಯೋಗದಲ್ಲಿ ಸೆ. 29ರಂದು ವಾಕ್ ಎ ಮೈಲ್ ಟು ಫೀಲ್ ಯುವರ್ ಬೀಟ್ ಆಯೋಜಿಸಲಾಗಿದೆ.

ವಿದ್ಯಾನಗರದ ಅಶೋಕ ಹಾಸ್ಪಿಟಲ್ ನಿಂದ ಬೆಳಗ್ಗೆ 8ಕ್ಕೆ ವಾಕ್ ಆರಂಭವಾಗಲಿದ್ದು, ಚನ್ನಮ್ಮ ವೃತ್ತದ ವರೆಗೆ ನಡೆಯಲಿದೆ.

ಡಿಸಿಪಿ ಮಹಾನಿಂಗ ನಂದಗಾವಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಡಾ. ಅಶೋಕ ಬಂಗಾರಶೆಟ್ಟರ್, ಡಾ. ವರ್ಷಾ ಬಂಗಾರಶೆಟ್ಟರ್, ಡಾ. ಸೃಷ್ಟಿ ವಾಳದ ಹಾಗೂ ಇತರರು ಕಾರ್ಯಕ್ರಮ ಆಯೋಜಿಸಿದ್ದಾರೆ.