ಬೆಂಗಳೂರು: ರಂಗಾಸ್ಥೆ ಟ್ರಸ್ಟ್ ಅಕ್ಟೋಬರ್ 26 ಶನಿವಾರ ‘ವಾಲಿ ವಧೆ’ ನಾಟಕ ಪ್ರದರ್ಶನ ಆಯೋಜಿಸಿದ್ದು, ಶ್ರೀ ಗಜಾನನ ಯುವಕ ಮಂಡಳಿಯು ಪ್ರಸ್ತುತಪಡಿಸುತ್ತಿದೆ.
‘ವಾಲಿ ವಧೆ’ ಕುವೆಂಪು ಅವರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಹಾಕಾವ್ಯವಾದ ಶ್ರೀ ರಾಮಾಯಣ ದರ್ಶನಂನಲ್ಲಿ ಚಿತ್ರಿಸಿದಂತೆ ವಾಲಿ ಮತ್ತು ಸುಗ್ರೀವ ಎಂಬ ಇಬ್ಬರು ಸಹೋದರರ ಕಥೆಯಾಗಿದೆ. ಈ ನಾಟಕವು ವಿವಿಧ ಕಲಾ ಪ್ರಕಾರಗಳನ್ನು ಕೆಲವು ಅದ್ಭುತ ನೃತ್ಯ ಮತ್ತು ಸಂಗೀತದೊಂದಿಗೆ ಸಂಯೋಜಿಸುತ್ತದೆ, ಮಕ್ಕಳು ಮತ್ತು ವಯಸ್ಕರನ್ನು ಸಮಾನವಾಗಿ ತೊಡಗಿಸುತ್ತದೆ ಎಂದು ರಂಗಾಸ್ಥೆಯ ಧನುಷ್ ತಿಳಿಸಿದ್ದಾರೆ.
ವಾಲಿಯ ಗೈರುಹಾಜರಿಯಲ್ಲಿ ಸುಗ್ರೀವ ರಾಜ್ಯಭಾರ ಮಾಡಿದ ಕಾರ್ಯದಲ್ಲಿ ತಪ್ಪಿದೆಯೇ? ಸುಗ್ರೀವನು ತನ್ನ ಸಹೋದರ ವಾಲಿಯನ್ನು ಕೊಂದದ್ದು ಸರಿಯೇ? ಈ ಕೃತ್ಯದಲ್ಲಿ ಸುಗ್ರೀವನನ್ನು ಬೆಂಬಲಿಸುವ ಮೂಲಕ ರಾಮನು ನಿಜವಾಗಿಯೂ ನ್ಯಾಯವನ್ನು ನೀಡಿದನೇ?
ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು, ನಾಟಕವನ್ನು ವೀಕ್ಷಿಸಬಹುದಾಗಿದೆ ಎಂದು ವಿವರಿಸಿದ್ದಾರೆ.
ಗಣೇಶ ಮಂದಾರ್ತಿ ವಿನ್ಯಾಸ, ಸಂಗೀತ, ನಿರ್ದೇಶನದ ಈ ನಾಟಕ ಶನಿವಾರ ಕಲಾಗ್ರಾಮದಲ್ಲಿ, ಮಧ್ಯಾಹ್ನ 3.30 ಹಾಗೂ ಸಂಜೆ 7.30 ಕ್ಕೆ ಪ್ರದರ್ಶನವಿದ್ದು, ಟಿಕೆಟ್‌ಗಳು ಬುಕ್‌ಮೈ ಶೋನಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.