ಜಿಲ್ಲೆ

ವಕ್ಫ್​ ಆಸ್ತಿ ಗೆಜೆಟ್​ ಅಧಿಸೂಚನೆ ರದ್ದುಪಡಿಸಲಿ

ಬೈಲಹೊಂಗಲ: ವಕ್ಫ್​ ಆಸ್ತಿ ಕುರಿತು ಸರ್ಕಾರದ ಗೆಜೆಟ್​ ಅಧಿಸೂಚನೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಭಾರತೀಯ ಕಿಸಾನ್​ ಸಂದ ಬೆಲಹೊಂಗಲ ಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಮುಖ್ಯಮಂತ್ರಿ, ಕಂದಾಯ ಸಚಿವರಿಗೆ ಗುರುವಾರ ಮನವಿ ಸಲ್ಲಿಸಿದರು.

ತಾಲೂಕು ಅಧ್ಯ ಮಹಾಂತೇಶ ಹೊಂಗಲ ಮಾತನಾಡಿ, ರಾಜ್ಯದಲ್ಲಿ ವಕ್ಫ್​ ಬೋರ್ಡ್​ ಜಮೀನುಗಳನ್ನು ಅಕ್ರಮವಾಗಿ ಸ್ವಾಧಿನ ಮಾಡಿಕೊಳ್ಳಲು ಪಹಣಿಯಲ್ಲಿ ವಕ್ಫ್​ ಆಸ್ತಿ ಎಂದು ನಮೂದು ಮಾಡಿರುವುದರಿಂದ ರೈತರು ಭಯಭೀತರಾಗಿದ್ದಾರೆ. ಮಠ&ಮಂದಿರಗಳು, ಸ್ಮಶಾನ ಭೂಮಿಗಳು ಆಕ್ರಮಿಸಿಕೊಳ್ಳುವ ಹುನ್ನಾರ ವಕ್ಫ್​ ಬೋರ್ಡ್​ ಮಾಡುತ್ತಿದೆ ಎಂದು ಕಿಡಿ ಕಾರಿದರು. ಇದಕ್ಕೆ ಸರ್ಕಾರ ಕೂಡಲೇ ಕ್ರಮ ಕೆಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಾಸರಟ್ಟ, ರಾಜ್ಯ ಸಂಟನಾ ಕಾರ್ಯದರ್ಶಿ ಪುಟ್ಟಸ್ವಾಮೀಜಿ, ಜಿಲ್ಲಾಧ್ಯ ಶಿವಾನಂದ ಸರದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಗಾಣಗಿ, ಅಜ್ಜಪ್ಪ ಭದ್ರಶೆಟ್ಟಿ, ಸಂತೋಷ ಚೌಡಣ್ಣವರ, ಮಲ್ಲಪ್ಪ ಹುಂಡನವರ, ರಾಮರಾಜ ಇನಾಮದಾರ, ಸುರೇಶ ನಂದೆಪ್ಪನವರ, ಬಸವರಾಜ ಕೋನನ್ನವರ, ಶಿವಾನಂದ ಜ್ಯೋತಿ, ಮಲ್ಲಿಕಾರ್ಜುನ ಹಾದಿಮನಿ, ರಾಜು ಅಂದಾನಶೆಟ್ಟಿ, ಶ್ರೀಧರ ಗಂಟಿ ಇತರರಿದ್ದರು.