ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ತಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಕೂಲಿಕಾರರಿಗೆ ಉದ್ಯೋಗ ಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಗಂಗಾವತಿ ತಾಪಂ ಕಚೇರಿ ಮುಂದೆ ಪ್ರಾಂತ ರೈತ ಸಂಘದ ತಾಲೂಕು ಸಮಿತಿಯಿಂದ ಪ್ರತಿಭಟನೆ

ಗಂಗಾವತಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಒತ್ತಾಯಿಸಿ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ತಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಚಿಕ್ಕಜಂತಕಲ್ ಮತ್ತು ಚಿಕ್ಕಬೆಣಕಲ್ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಕೂಲಿಕಾರರೊಂದಿಗೆ ಪ್ರತಿಭಟಿಸಿದ ಸಮಿತಿ ಸದಸ್ಯರು ಬೇಡಿಕೆ ಮನವಿ ಇಒ ಡಾ.ಮೋಹನ್‌ಗೆ ಸಲ್ಲಿಸಿದರು. ತಾಲೂಕು ಸಮಿತಿ ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ಚಿಕ್ಕಜಂತಕಲ್, ಚಿಕ್ಕಬೆಣಕಲ್ ವ್ಯಾಪ್ತಿಯ ಕೂಲಿಕಾರರು ಅರ್ಜಿ ನಮೂನೆ 6 ಸಲ್ಲಿಸಿ ತಿಂಗಳಾದರೂ ಈವರೆಗೂ ಕೆಲಸ ನೀಡುತ್ತಿಲ್ಲ. ಕರೊನಾ ಮುಂಜಾಗ್ರತೆ ಹಿನ್ನೆಲೆಯಲ್ಲಿ ಕೂಲಿಕಾರರು ಕೆಲಸ ಕಳೆದುಕೊಂಡಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಕೃಷಿ ಚಟುವಟಿಕೆಗಳನ್ನು ಯಂತ್ರದ ಮೂಲಕ ನಿರ್ವಹಿಸುತ್ತಿದ್ದರಿಂದ ಬಹುತೇಕ ಕೂಲಿಕಾರರಿಗೆ ಕೆಲಸವಿಲ್ಲ. ಕೆಲಸ ನೀಡುವರೆಗೂ ಹೋರಾಟ ಮುಂದುವರಿಸಲಾಗುವುದು ಎಂದರು.

ಕಾರ್ಯದರ್ಶಿ ಶ್ರೀನಿವಾಸ ಹೊಸಳ್ಳಿ, ಪದಾಧಿಕಾರಿಗಳಾದ ಕನಕಪ್ಪ, ವೆಂಕಟೇಶ, ಗಾದೆಪ್ಪ, ದುರುಗಪ್ಪ, ಹುಲಿಗೆಮ್ಮ, ದ್ಯಾಮಮ್ಮ ಇತರರಿದ್ದರು.