ವಡಗೇರಾ ತಾಲೂಕಿನ ರೊಟ್ನಡಗಿ ಗ್ರಾಮದ ಸುರೇಶಗೌಡ ಅವರ ಭತ್ತದ ಗದ್ದೆಯಲ್ಲಿ ಸೋಮವಾರ ಅರಣ್ಯ ಅಧಿಕಾರಿಗಳು ಮೊಸಳೆ ಹಿಡಿದಿದರು. ಶಹಾಪುರ ಉಪವಲಯ ಅರಣ್ಯಾಧಿಕಾರಿ ಕಾಶಪ್ಪ, ಗಸ್ತು ವನಪಾಲಕ ಮಹಾಂತೇಶ ಕುಂಬಾರ, ದುರಗಣ್ಣ ಇತರರಿದ್ದರು. 
ಜಿಲ್ಲೆ

ಭತ್ತದ ಗದ್ದೆಯಲ್ಲಿ ಮೊಸಳೆ ಪ್ರತ್ಯಕ್ಷ

ವಡಗೇರಾ: ಕೃಷ್ಣಾ ನದಿ ತೀರದ ರೊಟ್ನಡಗಿ ಗ್ರಾಮದ ಭತ್ತದ ಗದ್ದೆಯಲ್ಲಿ ಸೋಮವಾರ ಬೃಹದಾಕಾರದ ಮೊಸಳೆ ಪ್ರತ್ಯಕ್ಷವಾಗಿದೆ.

ರೊಟ್ನಡಗಿಯ ಸುರೇಶಗೌಡ ಅವರ ಭತ್ತದ ಗದ್ದೆಯಲ್ಲಿ ೫ ಅಡಿ ಉದ್ದದ ಮೊಸಳೆ ಕಂಡು ರೈತರು ಗಾಬರಿಗೊಂಡು ಅರಣ್ಯ ಅಧಿಕಾರಿಗಳಿಗೆ ತಿಳಿಸಿದರು.

ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಸಹಕಾರದಿಂದ ಮೊಸಳೆಯನ್ನು ಸೆರೆಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.

ಸುರಪುರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬುರಾನುದ್ದೀನ್, ಶಹಾಪುರ ಉಪವಲಯ ಅರಣ್ಯಾಧಿಕಾರಿ ಕಾಶಪ್ಪ, ಗಸ್ತು ವನಪಾಲಕ ಮಹಾಂತೇಶ ಕುಂಬಾರ, ದುರಗಣ್ಣ ಇದ್ದರು.