ಜಿಲ್ಲೆ

ವಿಟಿಯುನ ಮೇ ತಿಂಗಳ ವಿದ್ಯುತ್ ಬಿಲ್ 35 ಲಕ್ಷ ರೂ., ವಿಟಿಯುಗೆ ಹೆಸ್ಕಾಂ ಶಾಕ್!

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಮೇ ತಿಂಗಳ ವಿದ್ಯುತ್ ಬಿಲ್ ಬರೋಬ್ಬರಿ 35 ಲಕ್ಷ ರೂ. ಬಂದಿದ್ದು, ಹೆಸ್ಕಾಂ ನೀಡಿರುವ ಬಿಲ್ ಗೆ ವಿಟಿಯು ಶಾಕ್ ಆಗಿದೆ‌.
ರಾಜ್ಯದಲ್ಲಿರುವ ವಿಟಿಯುನ 5 ವಿಭಾಗೀಯ ಕೇಂದ್ರಗಳು ಹಾಗೂ ವಿಟಿಯು ಕ್ಯಾಂಪಸ್ ಸೇರಿ ವಿದ್ಯುತ್ ನ ಬಿಲ್ 35 ಲಕ್ಷ ರೂ. ಬಂದಿದೆ. ಮಾರ್ಚ್ ತಿಂಗಳಲ್ಲಿ 25,56,928 ರೂ, ಏಪ್ರಿಲ್ ತಿಂಗಳಲ್ಲಿ 25,29,021 ರೂ. ವಿದ್ಯುತ್ ಬಿಲ್ ಅನ್ನು ವಿಟಿಯು ಪಾವತಿಸಿತ್ತು. ಮೇ ತಿಂಗಳ ಬಿಲ್ 35,05,869 ರೂ. ಬಂದಿದ್ದು, 10 ಲಕ್ಷಕ್ಕೂ ಅಧಿಕ ಮೊತ್ತ ಬಿಲ್ ಹೆಚ್ಚುವರಿಯಾಗಿ ನೀಡಿದೆ.
ಬೆಳಗಾವಿಯಲ್ಲಿರುವ ವಿಟಿಯು ಕ್ಯಾಂಪಸ್ಸಿನ ಬಿಲ್ ಅಷ್ಟೇ ಈ 18 ಲಕ್ಷ ರೂ. ಬಂದಿದೆ.
10 ಲಕ್ಷ ಹೆಚ್ಚುವರಿ ಬಿಲ್ ಬಂದಿರುವುದಕ್ಕೆ ಹೆಸ್ಕಾಂ‌ಗೆ ಪತ್ರ ಬರೆಯಲು ವಿಟಿಯು ಕುಲಪತಿ ಚಿಂತನೆ ಮಾಡಿದ್ದಾರೆ.