ಬೆಳಗಾವಿ : ಇಲ್ಲಿನ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪ್ರೊ.ಪ್ರವೀಣ ಯಲ್ಲಪ್ಪ ಚಿಟ್ಟಿ ಅವರು ಮಂಡಿಸಿರುವ ‘ಇನ್ವೆಸ್ಟಿಗೇಷನ್ ಆಫ್ ಅ ಪ್ರೈವಸಿ ಪ್ರೆಸೆರ‌್ವಿಂಗ್ ಸೆಕ್ಯೂರ್ಡ್ ಕಂಟೆಂಟ್ ಬೇಸ್ಡ್ ಇಮೇಜ್ ರೆಟ್ರೀವಲ್ ಇನ್ ಹೈಬ್ರೀಡ್ ಕ್ಲೌಡ್ ಎನ್ವಿರಾನ್ಮೆಂಟ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿ ವಿಶ್ವವಿದ್ಯಾಲಯವುಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ. ಡಾ.ಕೆ.ಪ್ರಭುಶೆಟ್ಟಿ ಅವರು ಮಾರ್ಗದರ್ಶನ ನೀಡಿದ್ದರು.