ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿ ಟಿ ಯು) ಬೆಳಗಾವಿಯ ಕಂಪನಿ ಆಕ್ಟ್ ನ ಸೆಕ್ಷನ್ ೮ ಅಡಿಯಲ್ಲಿ ಸ್ಥಾಪಿಸಲಾದ ವಿಶ್ವೇಶ್ವರಯ್ಯ ರಿಸರ್ಚ್ ಮತ್ತು ಇನ್ನೊವೆಶನ ಫೌಂಡೇಶನ್ (ವಿ.ಆರ್.ಐ.ಎಪ್) ದಲ್ಲಿ ಯು. ಎಸ್. ಎ. ಮೂಲದ ಎಕ್ಸೆಲ್ ಕಾರ್ಪ್ ಕಂಪನಿಯ "ಸಾಫ್ಟ್ ವೆರ್ ಡೆವಲಪ್ಮೆಂಟ್ ಮತ್ತು ಪ್ರಾಡಕ್ಟ್ ಇನ್ನೋವೇಶನ್ ಕೇಂದ್ರ ಉದ್ಘಾಟನೆ ಗೊಂಡಿದೆ..
ಎಕ್ಸೆಲ್ ಕಾರ್ಪ್ ಕಂಪನಿಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಜೀತ್ ಗೋಯೆಲ್ ಉಪಸ್ಥಿತಯಲ್ಲಿ ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ ಎಸ್. ಅವರು ಈ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಕುಲಸಚಿವರುಗಳಾದ ಪ್ರೊ ಬಿ. ಈ. ರಂಗಸ್ವಾಮಿ, ಪ್ರೊ ಟಿ. ಎನ್. ಶ್ರೀನಿವಾಸ ಹಾಜರಿದ್ದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ ವಿದ್ಯಾಶಂಕರ ಎಸ್. ಅವರು ಇವತ್ತು ವಿಟಿಯು ಗೆ ಐತಿಹಾಸಿಕ ದಿನವಾಗಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾಗಿದೆ. ಕಾರಣ ರಾಜ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸರ್ವಾಂಗೀಣ ಹಾಗೂ ಕೌಶಲ್ಯಭರಿತ ನಾಗರೀಕರನ್ನಾಗಿ ಮಾಡಿ ವಿಕಸಿತ ಭಾರತಕ್ಕೆ ಒಂದು ದೊಡ್ಡ ಕೊಡುಗೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ವಿ ಟಿ ಯು ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಅದರಲ್ಲಿ ವಿದ್ಯಾರ್ಥಿಗಳು ಔದ್ಯೋಗಿಕ ರಂಗದ ಜೊತೆ ನೇರ ಚಿಂತನೆ ನಡೆಸಬೇಕು ಆದ್ದರಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೈಗಾರಿಕೆಗಳ ಕೇಂದ್ರಗಳನ್ನು ತರುವ ಉದ್ದೇಶ ಇವತ್ತು ಎಕ್ಸೆಲ್ ಕಾರ್ಪ್ ನ ಈ ಸಾಫ್ಟ್ ವೆರ್ ಡೆವಲಪ್ಮೆಂಟ್ ಹಾಗೂ ಪ್ರಾಡಕ್ಟ್ ಇನ್ನೋವೇಶನ್ ಕೇಂದ್ರದ ಉದ್ಘಾಟನೆಯೊಂದಿಗೆ ಸಾಕಾರಗೊಂಡಿದೆ ಎಂದು ಹೇಳಿದರು. ಈ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಕ್ಯಾಂಪಸನಲ್ಲೆ ಅನೇಕ ಔದ್ಯೋಗಿಕ ಮತ್ತು ತಾಂತ್ರಿಕ ಶಿಕ್ಷಣವನ್ನು ಒಂದೆ ವೇದಿಕೆಯಲ್ಲಿ ತಂದು ಇಂಟರ್ನಿಶಪ್ ಮತ್ತು ತರಬೇತಿ ಮೂಲಕ ಇಂದಿನ ಔದ್ಯೋಗಿಕ ವಲಯಕ್ಕೆ ಅವಶ್ಯಕತೆ ಇರುವ ಕೌಶಲಗಳನ್ನು ನೀಡಲಾಗುತ್ತಿದೆ ಅದಕ್ಕಾಗಿ ಸಿ ಎನ್ ಸಿ ವರ್ಕಶಾಪ್ ಸ್ಥಾಪಿಸಲಾಗಿದೆ ಮತ್ತು ಇದೆ ತರಹ ಕೌಶಲ್ಯ ನೀಡುವ ಪ್ರಯೋಗಾಲಯಗಳನ್ನು ನಿರ್ಮಿಸಲಾಗುತ್ತಿದೆ. ಅದೇ ರೀತಿ ಕೊಪ್ಪಳ ಮತ್ತು ದಾಂಡೇಲಿಯಲ್ಲಿರುವ ಕೌಶಲ್ಯ ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ ಮತ್ತು ಸುತ್ತಲಿನ ಇಂಜಿನಿಯರಿಂಗ್ ಕಾಲೇಜುಗಳ ಜೊತೆ ಒಡಂಬಡಿಕೆ ಮಾಡಿಕೊಂಡು ಇಂಟರ್ನಿಶಿಪ್ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದೆ ಕಾರಣಕ್ಕೆ ವಿ ಟಿ ಯು ರಾಷ್ಟೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC) ಜೊತೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.
ವಿ ಟಿ ಯು ಉದ್ದೇಶ ಕೇವಲ ತರಬೇತಿ ನೀಡುವುದಲ್ಲ ಅದರ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಇನ್ನೋವೇಟಿವ್ ಮತ್ತು ಸೃಜನಶೀಲ ಕೌಶಲಗಳನ್ನು ಗುರುತಿಸಿ ಹೊಸ ಐಡಿಯಾಗಳಿಗೆ ಮೂರ್ತರೂಪವನ್ನು ಕೊಟ್ಟು ಹೊಸ ಪ್ರಾಡಕ್ಟ್ ಅಥವಾ ತಮ್ಮದೆ ಸ್ಟಾರ್ಟ ಅಪ್ ಆರಂಭಿಸಲು ವಿ ಟಿ ಯು ವಿ. ಆರ್. ಐ. ಆಪ್. ಮುಖಾಂತರ ಉತ್ತೇಜನ್ ನೀಡಿ ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಯುವ ಜನತೆಗೆ ಅವಕಾಶವನ್ನು ಕೊಟ್ಟು ಬೆಳಗಾವಿಯನ್ನು ಸ್ಟಾರ್ಟ್ ಅಪ್ ಹಬ್ ಮಾಡುವ ಗುರಿ ಇದೆ ಎಂದು ಹೇಳಿದರು. ಇದಕ್ಕೆ ನೆರವಾಗುವ ರೀತಿಯಲ್ಲಿ ವಿ ಟಿ ಯು ನಲ್ಲಿ ಔದ್ಯೋಗಿಕ ಕ್ಷೇತ್ರದ ದಿಗ್ಗಜರೊಂದಿಗೆ ಎಲ್ಲ ಜಿಲ್ಲೆಗಳಲ್ಲಿ ಚಿಂತನ-ಮಂಥನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಮೊದಲಿಗೆ ಮಾತನಾಡಿದ ಎಕ್ಸೆಲ್ ಕಾರ್ಪ್ ಕಂಪನಿಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಜೀತ್ ಗೋಯೆಲ್ ಮಾತನಾಡಿ, ಬೆಳಗಾವಿ ಎಲ್ಲ ರೀತಿಯ ಔದ್ಯೋಗಿಕ ಹಬ್ ಆಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ ಇಲ್ಲಿ ಯುವ ಪ್ರತಿಭೆಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಮೂಲಸೌಕರ್ಯ, ಕೈಗಾರಿಕೆಗಳು ಮತ್ತು ಎಲ್ಲ ಕಾಲದಲ್ಲಿಯೂ ಅನುಕೂಲಕರ ವಾತಾವರಣವಿದ್ದು ಎಲ್ಲ ರೀತಿಯ ಕೈಗಾರಿಕೆಗಳು ಬೆಳೆಯಲು ಭೌಗೋಳಿಕವಾಗಿ ಅನೂಕೂಲತೆಗಳನ್ನು ಹೊಂದಿದೆ ಎಂದು ಹೇಳಿದರು. ಈ ಎಲ್ಲ ಅನುಕೂಲಗಳ ನಡುವೆಯೂ ಯುವ ಪ್ರತಿಭೆಗಳು ಬೆಳಗಾವಿಯಿಂದ ಬೆಂಗಳೂರು, ಪುಣೆ, ಹೈದರಾಬಾದ್ನಂತಹ ನಗರಗಳಲ್ಲಿ ಜೀವನೋಪಾಯವನ್ನು ಹುಡುಕಿಕೊಂಡು ಹೋಗುತ್ತಿವೆ ಇದನ್ನು ತಡೆದು ಉತ್ತರ ಕರ್ನಾಟಕ ಭಾಗದಲ್ಲಿ ಸಾಫ್ಟ್ ವೆರ್ ವಲಯದ ಜೊತೆಗೆ ಉತ್ಪಾದನಾ ವಲಯದ ಕೈಗಾರಿಕೆಗಳನ್ನು ಬೆಳೆಸಿ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಕ್ಷೇತ್ರದ್ ಬೇಡಿಕೆಗೆ ತಕ್ಕಂತೆ ಕೌಶಲ್ಯಗಳನ್ನು ಮತ್ತು ಇಂಟರ್ನ್ಶಿಪ್ ಗಳನ್ನೂ ನೀಡಲು ಎಕ್ಸೆಲ್ ಕಾರ್ಪ್ ತನ್ನ ಸಾಫ್ಟ್ವೇರ್ ಡೆವಲಪ್ಮೆಂಟ್ ಕೇಂದ್ರವನ್ನು ಉದ್ಘಾಟಿಸಿದೆ ಇದರ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗವನ್ನು ಸೃಷ್ಟಿಸುವತ್ತ ಗಮನಹರಿಸುತ್ತದೆ ಎಂದು ಜೀತ್ ಗೋಯೆಲ್ ಹೇಳಿದರು.