-ಬೌದ್ಧಿಕ ಪ್ರತಿಭೆ ಗುರುತಿಸಲು ಸಮಾನ ಮನಸ್ಕರ ವೇದಿಕೆಯ ಕಾರ್ಯ
ಬೆಳಗಾವಿ: ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಬೌದ್ಧಿಕ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವ ಏಕೈಕ ಉದ್ದೇಶದಿಂದ ಸಮಾನ ಮನಸ್ಕರ ವೇದಿಕೆಯು ಪ್ರತಿವರ್ಷದಂತೆ ಈ ಬಾರಿಯೂ ಕೂಡ ರಸಪ್ರಶ್ನೆ, ಚದುರಂಗ, ಚುಕ್ಕಿ ರಂಗೋಲಿ, ಫ್ಯಾನ್ಸಿ ಡ್ರೆಸ್ ಹೀಗೆ ವಿವಿಧ ರಸಪ್ರಶ್ನೆ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದ ಮಾರುತೇಶ್ವರ ಓಕುಳಿಯ ನಿಮಿತ್ತವಾಗಿ ಸಮಾನ ಮನಸ್ಕರ ವೇದಿಕೆಯು ಮೇ 11ರಂದು ಸರ್ಕಾರಿ ಹಿದಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಸಪ್ರಶ್ನೆಯ 50 ಅಂಕದ ಲಿಖಿತ ಪರೀಕ್ಷೆಗಳನ್ನು ಹಮ್ಮಿಕೊಂಡಿದೆ.ಪ್ರಾಥಮಿಕ ವಿಭಾಗ(5,6,7) ಮತ್ತು ಫ್ರೌಡ ವಿಭಾಗ(8,9,10) (ಆಯಾ ವಿಭಾಗ ತರಗತಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.)ಪ್ಯಾನ್ಸಿ ಡ್ರೇಸ್ ಶೋ 1-4ನೇ ತರಗತಿ, ಚುಕ್ಕಿ ರಂಗೋಲಿ ಸ್ಪರ್ಧೆ ಹಾಗೂ ಚದುರಂಗ ಸ್ಪರ್ಧೆ ವಯಸ್ಸಿನ ನಿರ್ಬಂಧ ಇರುವುದಿಲ್ಲ. ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿರುವ ಶಿಕ್ಷಕ ಎಸ್.ಎಸ್.ಕುದರಿ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 80ಕ್ಕಿಂತ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.