ವಿಜಯಪುರ: ಡಿ.22 ರಂದು ಆಯೋಜಿಸಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್ಗೆ ನೋಂದಣಿ ಮಾಡಲು ನ.30 ಕೊನೆಯ ದಿನವಾಗಿದ್ದು, ಆಸಕ್ತರು ನೋಂದಣಿ ಮಾಡಿಕೊಳ್ಳಬೇಕು ಎಂದು ಕೋಟಿ ವೃ ಅಭಿಯಾನ ಪ್ರತಿಷ್ಠಾನ ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಸಿ ನೆಟ್ಟು, ಮರ ಬೆಳೆಸಲು ಪ್ರೋತ್ಸಾಹಿಸುವ ವಿಜಯಪುರ ಹಸಿರಿನ ಹಬ್ಬ ಐತಿಹಾಸಿಕ ಸ್ಮಾರಕಗಳ ಸಂರಣೆ ಕುರಿತ ಜನ ಜಾಗೃತಿ ಓಟದಲ್ಲಿ 18 ವಯಸ್ಸಿನ ಮೇಲ್ಪಟ್ಟ ಯುವಕರಿಂದ ವೃದ್ಧರಾದಿಯಾಗಿ ಎಲ್ಲರೂ ನೋಂದಣಿ ಮಾಡಬಹುದಾಗಿದೆ. 5 ಕಿಮೀ, 10 ಕಿಮೀ ಮತ್ತು 21ಕಿ ಮೀ ಓಟದಲ್ಲಿ ಭಾಗವಹಿಸಲು ಅವಕಾಶವಿದೆ.
ಈ ಓಟವನ್ನು ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗೆ ಸಮರ್ಪಿಸಲಾಗಿದ್ದು, ಓಟದಲ್ಲಿ ಭಾಗವಹಿಸಿದ ಎಲ್ಲರಿಗೂ ಸಿದ್ಧೇಶ್ವರ ಸ್ವಾಮೀಜಿ ಭಾವಚಿತ್ರಯುಳ್ಳ ಕಂಚಿನ ಪದಕ ನೀಡಲಾಗುವುದು. ಉತ್ತಮ ಗುಟಮಟ್ಟದ ಟಿ&ಶರ್ಟ್, ಓಟದ ಮಾರ್ಗದಲ್ಲಿ ಲು ಪಾನಿಯ ವ್ಯವಸ್ಥೆ ಮತ್ತು ಪೌಷ್ಟಿಕ ಉಪಹಾರದ ವ್ಯವಸ್ಥೆ ಇರುತ್ತದೆ. ಈ ಬಾರಿ 15 ಸಾವಿರ ಓಟಗಾರರು ಓಡುವ ನಿರೀೆಯಿದೆ. ಆಸಕ್ತರು ಕೂಡಲೇ (https://vrukshathon.co.in/event/) ಲಿಂಕ್ ಮೂಲಕ ನೋಂದಣಿ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ರಾಜು ಯಲಗೊಂಡ ಮೊ. 80951 90218 ಮತ್ತು ವೀರೇಂದ್ರ ಗುಚ್ಚಟ್ಟಿ ಮೊ. 98866 68498ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.