ವಿಜಯಪುರದಲ್ಲಿ ಡಿಸೆಂಬರ್​ನಲ್ಲಿ ನಡೆಯಲಿರುವ ವೃಕ್ಷೋಥಾನ್​ ಹೆರಿಟೇಜ್​ ರನ್​& 2024 ಆಯೋಜನೆ ಹಿನ್ನೆಲೆ ಕೋರ್​ ಕಮಿಟಿ ಪದಾಧಿಕಾರಿಗಳು ನಗರದ ಜಿಓಸಿಸಿ ಬ್ಯಾಂಕಿನ್​ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಡಾ.ಮಹಾಂತೇಶ ಬಿರಾದಾರ, ಅರ್ಜುನ ಲಮಾಣಿ, ಅಶೋಕ ಚನ್ನಬಸುಗೋಳ ಮತ್ತಿತರರಿದ್ದಾರೆ. 
ಜಿಲ್ಲೆ

ವೃಕ್ಷೋಥಾನ್​ ಹೆರಿಟೇಜ್​ ರನ್​ ಪದಾಧಿಕಾರಿಗಳ ಸಭೆ

ಗಿರೀಶ ಸಗರ

ವಿಜಯಪುರ: ಜಿಲ್ಲೆಯಲ್ಲಿ ಮುಂಬರುವ ಡಿ.22 ರಂದು ನಡೆಯಲಿರುವ ವೃಕ್ಷೋಥಾನ್​ ಹೆರಿಟೇಜ್​ ರನ್​&2024 ಆಯೋಜನೆ ಹಿನ್ನೆಲೆ ಕೋರ್​ ಕಮಿಟಿ ಪದಾಧಿಕಾರಿಗಳು ಗುರುವಾರ ನಗರದ ಜಿಒಸಿಸಿ ಬ್ಯಾಂಕಿನ್​ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಹೆರಿಟೇಜ್​ ರನ್​ ಆಯೋಜನೆ ಉದ್ದೇಶ ಪ್ರವಾಸೋದ್ಯಮ ಮತ್ತು ಪರಿಸರ ಸಂರಕ್ಷಣೆ ಕುರಿತು ಜಿಲ್ಲೆಯ ಜನರಿಗೆ ಆಗಲಿರುವ ಅನುಕೂಲಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ, ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲರ ನೀರಾವರಿ ಯೋಜನೆಗಳಿಂದ ಪ್ರಕೃತಿಯಲ್ಲಿ ಉಂಟಾದ ಬದಲಾವಣೆ, ರೈತರು ಮತ್ತು ಜನಸಾಮಾನ್ಯರ ಬದುಕಿನಲ್ಲಿ ಆಗಿರುವ ಆರ್ಥಿಕ ಸುಧಾರಣೆ ಕುರಿತು ತಿಳಿಸಿದರು.

ಬ್ಯಾಂಕಿನ್​ ಅಧ್ಯಕ್ಷ ಅರ್ಜುನ ಲಮಾಣಿ ಮಾತನಾಡಿ, ಸಚಿವ ಎಂ.ಬಿ. ಪಾಟೀಲರ ದೂರದೃಷ್ಟಿಯ ಫಲವಾಗಿ ಜಿಲ್ಲೆ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ. ಸದ್ಯ ಆಯೋಜಿಸಿದ ಹೆರಿಟೇಜ್​ ರನ್​ಗೆ ಸಕಲ ರೀತಿಯಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬ್ಯಾಂಕಿನ ಉಪಾಧ್ಯಕ್ಷ ಅಶೋಕ ಚನ್ನಬಸುಗೋಳ, ನಿರ್ದೇಶಕರಾದ ಹಣಮಂತ ಕೊಣದಿ, ಚಂದ್ರಶೇಖರ ಜತ್ತಿ, ಉಮೇಶ ಗುಡ್ನಾಳ, ಆನಂದಗೌಡ ಬಿರಾದಾರ, ಪ್ರಧಾನ ವ್ಯವಸ್ಥಾಪಕಿ ಎಂ.ಬಿ. ಪರ್ವತಿ, ವ್ಯವಸ್ಥಾಪಕ ಎಂ.ಕೆ. ಜೋಶಿ, ಕಂಪ್ಯೂಟರ್​ ಎಂಜಿನಿಯರ್​ ಸಿ.ಎಸ್​. ಹಿರೇಮಠ ಮತ್ತಿತರರಿದ್ದರು.