ಪುತ್ತೂರು: ಬದುಕಿರುವಾಗ ಮಾಡುವ ಕೆಲಸ-ಕಾರ್ಯ ಶಾಶ್ವತವಾಗಿ ಉಳಿಯಬೇಕು. ಸ್ವಂತಕ್ಕೆ ಸ್ಪಲ್ಪ ಸಮಾಜಕ್ಕೆ ಸರ್ವಸ್ವ ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಡೆದುಕೊಳ್ಳಬೇಕಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಹೇಳಿದರು.
ವಿವೇಕಾನಂದ ಕ್ಯಾಂಪಸ್‌ನ ಕೇಶವ ಸಂಕಲ್ಪದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ ವಾರ್ಷಿಕೋತ್ಸವದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನದ ಜತೆಗೆ ನಾಯತ್ವದ ಗುಣವನ್ನು ರೂಢಿಸಿಕೊಳ್ಳಬೇಕು. ಕೃಷ್ಣನ ಆದರ್ಶದಂತೆ ನಡೆದಾಗ ಸಮಾಜವನ್ನು ಸದೃಢವಾಗಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಮಂಗಳೂರು ಕೆಪಿಟಿ ಪ್ರಾಂಶುಪಾಲ ಹರೀಶ ಶೆಟ್ಟಿ, ವಿಪಿಟಿ ಹಳೆಯ ವಿದ್ಯಾರ್ಥಿ ಅರುಣ್ ಕುಮಾರ್ ರೈ ಡಿಂಬ್ರಿ ಬಹುಮಾನ ವಿತರಣೆ ಮಾಡಿದರು. ಅಗ್ನಿವೀರ್ ಸೈನಿಕ ಸೃಜನ್ ರೈ ಕೆ. ಆರ್., ಅಂತಾರಾಷ್ಟ್ರೀಯ ಹ್ಯಾಂಡ್‌ಬಾಲ್ ಆಟಗಾರ ಕೀರ್ತೇಶ್ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯ ಬಹುಮಾನ ವಿತರಣೆ ನಡೆಸಲಾಯಿತು. ದತ್ತಿನಿಽ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ವಿಶ್ವೇಶ್ವರ ಭಟ್ ಬಿ. ವಹಿಸಿದ್ದರು.
ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ತ್ರಿ, ವಿದ್ಯಾರ್ಥಿ ಕ್ಷೇಮಾಽಕಾರಿ ಸುಧಾ, ವಿದ್ಯಾರ್ಥಿ ಪರಿಷತ್ತಿನ ಕಾರ್ಯದರ್ಶಿ ರುತ್ವಿಕ್ ಎ. ಸಿ., ಸಾಂಸ್ಕೃತಿಕ ಮತ್ತು ಸ್ಪರ್ಧಾ ಕಾರ್ಯದರ್ಶಿ ಸುಮನ್ ಡಿ., ಆಯುಧ ಪೂಜಾ ಕಾರ್ಯದರ್ಶಿ ವರ್ಷಿತ್ ಬಿ., ಕ್ರೀಡಾ ಕಾರ್ಯದರ್ಶಿ ದೀವಿತ್ ಶೆಟ್ಟಿ, ಮಹಿಳಾ ಪ್ರತಿನಿಽ ಶ್ರಾವ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಾಽಕಾರಿ ರವಿರಾಮ್ ಎಸ್. ಸ್ವಾಗತಿಸಿದರು. ಪ್ರಾಂಶುಪಾಲ ಮುರಳೀಧರ ಎಸ್. ವಾರ್ಷಿಕ ವರದಿ ವಾಚಿಸಿದರು. ಚೈತ್ರ, ಅನ್ವಿತಾ, ಕಿರಣ್‌ಪಾಲ್ ಬಹುಮಾನ ವಿಜೇತರ ಪಟ್ಟಿ ಓದಿದರು. ಅನನ್ಯ ವಿದ್ಯಾರ್ಥಿ ಪರಿಷತ್ತು ಅಧ್ಯಕ್ಷ ಅಶ್ಮಿಕ್ ಜಿ.ಕೆ. ವಂದಿಸಿದರು. ಉಪನ್ಯಾಸಕರಾದ ಉಷಾಕಿರಣ, ಗುರುರಾಜ್ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮಿ ಸಹಕರಿಸಿದರು.
ಪುಸ್ತಕದ ವಿಚಾರಗಳನ್ನು ಕಲಿತು ಪ್ರಮಾಣಪತ್ರವನ್ನು ಹಿಡಿದು ಹೊರ ಬರದೆ, ಸ್ವಂತ ಅನುಭವವನ್ನು ಮೈಗೂಡಿಸಿಕೊಂಡು ಹೊರಬರಬೇಕು. ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾ ಶಕ್ತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಮೈಗೂಡಿಸಿಕೊಳ್ಳಬೇಕು. ಇಷ್ಟಪಟ್ಟ ಜ್ಞಾನವನ್ನು ಪೂರ್ತಿ ಪಡೆದು, ಅದನ್ನು ಸಮಾಜಕ್ಕೆ ನೀಡಲು ಪ್ರಾರಂಭಿಸಿ ಉಳಿದ್ದೆಲ್ಲವೂ ತನ್ನಷ್ಟಕ್ಕೆ ಬರಲು ಪ್ರಾರಂಭವಾಗುತ್ತದೆ.
| ಹರೀಶ ಶೆಟ್ಟಿ
ಪ್ರಾಂಶುಪಾಲರು, ಮಂಗಳೂರು ಕೆಪಿಟಿ