ಜಿಲ್ಲೆ

ಕ್ವಾರಂಟೈನ್ ಮನೆಗಳಿಗೆ ಚೀಟಿ, ಕೋಡಿಪಾಳ್ಯದಲ್ಲಿ ಹೈ ಅಲರ್ಟ್ ಲಾಕ್‌ಡೌನ್ ಬಿಗಿ

Bengaluru Rural

ದೊಡ್ಡಬಳ್ಳಾಪುರ ಗ್ರಾಮಾಂತರ: ಕರೊನಾ ಸೋಂಕಿತ ಕೋಡಿಪಾಳ್ಯ ಗ್ರಾಮದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರೈಮರಿ ಹಾಗೂ ಸೆಕಂಡರಿ ಸಂಪರ್ಕದ ವ್ಯಕ್ತಿಗಳ ಮನೆಗಳ ಮುಂದೆ ಹೋಮ್ ಕ್ವಾರಂಟೈನ್ ಚೀಟಿ ಅಂಟಿಸಿ ಹೊರಗಡೆ ಬರದಂತೆ ಸಲಹೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ಗ್ರಾಮದ ಎಲ್ಲಾ ಮನೆಗಳಿಗೆ ಸೋಮವಾರದಿಂದಲೇ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಗ್ರಾಮದ ಹಾಲಿನ ಕೇಂದ್ರ ಬಂದ್ ಮಾಡಲಾಗಿದ್ದು, ಗ್ರಾಮದಿಂದ ಯಾರು ಬರದಂತೆ ಹೋಗದಂತೆ ತಡೆಯಲು ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಮಾಡಲಾಗಿದೆ. ಮಧುರೆ ಕನಸವಾಡಿ ಕೋಡಿಪಾಳ್ಯ ಗ್ರಾಮಗಳಲ್ಲಿ ಸಂಪೂರ್ಣ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಲಾಗಿದೆ. ಯಾರೂ ಹೊರಬರದಂತೆ ಸೂಚಿಸಿಲಾಗಿದೆ. ನಾಗರೀಕರಿಗೆ ಸಹಾಯವಾಣಿ ಸಂಖ್ಯೆ ನೀಡಲಾಗಿದ್ದು ಅಗತ್ಯ ಸೇವೆಗಳಿಗೆ ಕರೆ ಮಾಡಲು ಸೂಚಿಸಲಾಗಿದೆ.

ಇಸೂರಿನಲ್ಲಿ ಕ್ವಾರಂಟೈನ್: ಈಗಾಗಲೇ 10 ಮಂದಿಯನ್ನು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಗಾ ವಹಿಸಿಲಾಗಿದ್ದು, 9 ಜನರನ್ನು ಹೊನ್ನಾವರ ಗ್ರಾಮ ಪಂಚಾಯಿತಿಯ ಇಸ್ತೂರು ಬಳಿಯ ಅಂಬೇಡ್ಕರ್ ವಸತಿ ಶಾಲೆಯ ಕಟ್ಟದಲ್ಲಿ ಇರಿಸಲಾಗಿದೆ. ಉಳಿದವರನ್ನು ಗ್ರಾಮದಲ್ಲಿ ಕ್ವಾರಂಟೈನ್ ಮಾಡಲಾಗಿದೆ.