ವಿಜಯಪುರದ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾನ ದಿನಾಚರಣೆಯಲ್ಲಿ ಮತದಾನ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಪ್ರೊ. ಐ.ಎಸ್​. ಕಾಳಪ್ಪನವರ, ಡಾ. ವೈ. ತಮ್ಮಣ್ಣ, ಡಾ. ಸವಿತಾ ಲಮಾಣಿ ಮತ್ತಿತರರಿದ್ದಾರೆ.  
ಜಿಲ್ಲೆ

ಮತದಾನ ನಮ್ಮೆಲ್ಲರ ಹಕ್ಕು

ಗಿರೀಶ ಸಗರ

ವಿಜಯಪುರ: ಸುಭದ್ರ ಭಾರತದ ನಿರ್ಮಾಣಕ್ಕಾಗಿ ಜಾಗೃತ ಮತದಾರರ ಅಗತ್ಯವಿದೆ. 18 ವರ್ಷದ ತುಂಬಿದ ಪ್ರತಿಯೊಬ್ಬರು ಗುರುತಿನ ಚೀಟಿ ಮಾಡಿಸಿ ತಪ್ಪದೇ ಮತ ಚಲಾಯಿಸುವ ಮೂಲಕ ನಮ್ಮ ಹಕ್ಕು ಚಲಾಯಿಸಬೇಕು ಎಂದು ಎಸ್​ಎಸ್​ ಆವರಣದ ಆಡಳಿತಾಧಿಕಾರಿ ಪ್ರೊ. ಐ.ಎಸ್​. ಕಾಳಪ್ಪನವರ ಹೇಳಿದರು.

ನಗರದ ಬಿಎಲ್​ಡಿ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಐಕ್ಯೂಎಸಿ, ರಾಜ್ಯಶಾಸ ವಿಭಾಗ, ಎನ್​ಎಸ್​ಎಸ್​ ಟಕಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮತದಾನ ನಮ್ಮೆಲ್ಲರ ಹಕ್ಕು ಅದರ ಕುರಿತು ಜಾಗೃತಿ ಮೂಡಿಸುವುದೇ ಮತದಾನ ದಿನಾಚರಣೆಯ ಮುಖ್ಯ ಉದ್ದೇಶ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ವೈ. ತಮ್ಮಣ್ಣ ಮಾತನಾಡಿ, ಇಂದಿನ ಅರಸ್ಥರೆ ಮತದಾನದಿಂದ ಹೊರಗೆ ಉಳಿಯುತ್ತಿರುವುದು ತುಂಬಾ ಖೇದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯಶಾಸ ವಿಭಾಗದ ಮುಖ್ಯಸ್ಥೆ ರೇಖಾ ಗಡಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಲಮಾಣಿ ಮತದಾರ ಪ್ರತಿಾ ವಿಧಿ ಬೋಧಿಸಿದರು. ಮತದಾನ ದಿನಾಚರಣೆಯ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಐಕ್ಯೂಎಸಿ ಸಂಯೋಜಕಿ ಡಾ. ಭಕ್ತಿ ಮಹೇಂದ್ರಕರ, ಶಿಣಶಾಸ ವಿಭಾಗದ ಮುಖ್ಯಸ್ಥ ವಿ.ಎಸ್​. ನಂದೇಶ, ಹಿಂದಿ ವಿಭಾಗದ ಡಾ. ಕೆ.ಎ. ಪಾಟೀಲ ವೇದಿಕೆಯಲ್ಲಿದ್ದರು.

ಹಿರಿಯ ಪ್ರಾಧ್ಯಾಪಕರಾದ ಪಿ.ಎಸ್​. ಡಾ. ಜಯಶ್ರೀ ಬೀರಪ್ಪ, ಸೌಜನ್ಯ ಬೀಳಗಿ, ವಿದ್ಯಾರ್ಥಿನಿಯರು ಮತ್ತಿತರರಿದ್ದರು.