ಇಳಕಲ್ಲ: ಯಾವುದೇ ಚುನಾವಣೆ ಇರಲಿ ಅದರ ಪ್ರಾಮುಖ್ಯ ಅರಿತು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮತದಾನ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಉಪನ್ಯಾಸಕಿ ಜಯಶ್ರೀ ಕಂದಗಲ್ಲ ಹೇಳಿದರು.
ಇಲ್ಲಿನ ಎಸ್.ವಿ.ಎಂ. ಪಿಯು ಕಾಲೇಜಿನಲ್ಲಿ ಮಹಿಳಾ ವೇದಿಕೆ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳೇ ಜೀವನಾಡಿಯಾಗಿದ್ದು, ಮತದಾನ ಮಾಡಿ ನಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.
ಪ್ರಾಚಾರ್ಯ ಎಸ್.ವಿ.ಕಂಬಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆ ಚೇರ್ಮನ್ ಎಂ.ಆರ್.ಮಂಜುಳಾ, ರೇಣುಕಾ ಲೋಕಣ್ಣನವರ , ಡಾ ಲಕ್ಷ್ಮಿ ರಾಜಾಪುರ, ಬಿ.ಎಲ್. ಪೊಶೆಟ್ಟಿ ಉಪಸ್ಥಿತರಿದ್ದರು.