ಧಾರವಾಡ: ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೋಂದಾಯಿಸಿಕೊ೦ಡಿರುವ ೮೫ ವರ್ಷ ಮೇಲ್ಪಟ್ಟವರು ಮತ್ತು ಶೇ. ೪೦ಕ್ಕಿಂತ ಹೆಚ್ಚು ಅಂಗವಿಕಲತೆ ಇರುವವರಿಗೆ ಏ. ೨೫ ಮತ್ತು ೨೬ರಂದು ಮನೆಯಿಂದ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿ ಆಯೋಗದ ನಿಯಮಗಳನ್ನು ಪಾಲಿಸಿ ಮತದಾನದ ಗೌಪ್ಯತೆ ಕಾಪಾಡಬೇಕು ಎಂದು ಚುನಾವಣಾಽಕಾರಿ ದಿವ್ಯ ಪ್ರಭು ಹೇಳಿದರು.
ಮನೆಯಿಂದ ಮತದಾನ ಕುರಿತು ನಗರದ ಆಲೂರು ವೆಂಕಟರಾವ್ ಭವನದಲ್ಲಿ ಅಽಕಾರಿಗಳಿಗೆ ಬುಧವಾರ ಆಯೋಜಿಸಿದ್ದ ತರಬೇತಿ ಕಾಯÁðಗಾರದಲ್ಲಿ ಅವರು ಮಾತನಾಡಿದರು.
ನೋಂದಾಯಿತ ಮತದಾರರು ನಿಗದಿತ ದಿನಗಳಂದು ಮನೆಯಲ್ಲಿ ಇರಬೇಕು. ಬೆಳಗ್ಗೆ ೭ರಿಂದ ಸಂಜೆ ೬ರವರೆಗೆ ಮತದಾನ ನಡೆಯಲಿದೆ. ಅಽಕಾರಿಗಳು ಮತಗಟ್ಟೆಯಲ್ಲಿ ಮತದಾನ ಮಾಡುವಾಗ ಅನುಸರಿಸುವ ನಿಯಮಗಳನ್ನು ಮನೆಯಿಂದ ಮತದಾನದಲ್ಲೂ ಅನುಸರಿಸಬೇಕು. ಮತದಾರ ಮತ್ತು ಅಽಕಾರಿಗಳು ಮಾತ್ರ ಮತದಾನ ಸ್ಥಳದಲ್ಲಿ ಇರಬೇಕು. ಪೊಲೀಸರು ಅಗತ್ಯ ಭದ್ರತೆ ನೀಡಬೇಕು. ಮತದಾನದ ಪೂರ್ಣ ಪ್ರಕ್ರಿಯೆಯನ್ನು ನಿಯಮದಂತೆ ವಿಡಿಯೋ ಚಿತ್ರೀಕರಣ ಮÁಡಬೇಕು ಎಂದರು.
ಕಲಘಟಗಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಽಕಾರಿ ಸಿದ್ದು ಹುಲ್ಲೋಳಿ ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಸಹಾಯಕ ಚುನಾವಣಾಽಕಾರಿಗಳಾದ ಪ್ರಿಯÁಂಗ ಎಂ., ಡಾ. ಈಶ್ವರ ಉಳ್ಳಾಗಡ್ಡಿ, ವಿನೋದಕುಮÁರ ಹೆಗ್ಗಳಗಿ, ರುದ್ರೇಶ ಗಾಳಿ, ದೇವರಾಜ ಆರ್., ಶಾಲಂ ಹುಸೇನ್, ತಹಸೀಲ್ದಾರ್‌ರಾದ ಮಲ್ಲಿಕಾರ್ಜುನ ಹೆಗ್ಗಣ್ಣವರ, ದೊಡ್ಡಪ್ಪ ಹೂಗಾರ, ಬಸವರಾಜ ಬೆಣ್ಣಿಶಿರೂರ ಹಾಗೂ ನಿಯೋಜಿತ ಅಽಕಾರಿ, ಸಿಬ್ಬಂದಿಗಳು ಹಾಜರಿದ್ದ್ದರು.