ಶ್ರೀರಂಗಪಟ್ಟಣ: ಮಂಡ್ಯ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕು ಆಡಳಿತದಿಂದ 84ಡಿ ಅರ್ಜಿ ಪಡೆದು ಅರ್ಹತೆ ಹೊಂದಿದ್ದ ಶತಾಯುಷಿಯೊಬ್ಬರು ಲೋಕಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಮಾಡಿದರು.
ತಾಲೂಕಿನ ತಡಗವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹಾರೋಹಳ್ಳಿ ಗ್ರಾಮದ 102 ವರ್ಷದ ಶತಾಯುಷಿ ಹೊಂಬಾಳಮ್ಮ ಮತದಾನ ಮಾಡಿದ್ದು, ತಮ್ಮ ಇಷ್ಟದ ಅಭ್ಯರ್ಥಿಯನ್ನು ಆಯ್ಕೆಯ ಹಕ್ಕನ್ನು ಚಲಾಯಿಸಿದರು. ಈ ವೇಳೆ ಹೊಂಬಾಳಮ್ಮ ಅವರಿಗೆ ತಾಲೂಕು ಪಂಚಾಯಿತಿ ವತಿಯಿಂದ ಗೌರವಿಸಲಾಯಿತು. ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದರು.