ಅಂಚೆ ಇಲಾಖೆ ಲಕೋಟೆಗಳ ಮೇಲೆ ಮತ ಜಾಗೃತಿ ಮೂಡಿಸುವ ಮೊಹರು ಹಾಕಿರುವುದು. 
ಜಿಲ್ಲೆ

ಮತದಾನ ಜಾಗೃತಿ ವಿವಿಧ ಇಲಾಖೆಗಳ ಸಾಥ್​

ಇಂಡಿ: ಲೋಕಸಭಾ ಚುನಾವಣೆ ಸಂಬಂಧ ಮತದಾನ ಜಾಗೃತಿಗೆ ಈ ಬಾರಿ ಆರೋಗ್ಯ ಇಲಾಖೆ ಕೈಜೋಡಿಸಿದ್ದು ರೋಗಿಗಳಿಗೆ ನೀಡುವ ಚೀಟಿಗಳ ಮೇಲೂ ಮತ ಜಾಗೃತಿ ಮೂಡಿಸುತ್ತಿದೆ.

ಅಂಚೆ ಇಲಾಖೆ ಪ್ರತಿ ಪೋಸ್ಟ್​ನಲ್ಲಿಯೂ ಮತಜಾಗೃತಿ ಮೂಡಿಸುತ್ತಿದೆ. ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರಿಗೆ ಬರುವ ಪತ್ರಗಳ ಮೇಲೆ ಚುನಾವಣೆ ಪರ್ವ ದೇಶದ ಗರ್ವ ಎಂದು ಮೊಹರು (ಸೀಲ್​) ಹಾಕಲಾಗುತ್ತಿದೆ. ಇನ್ನೊಂದೆಡೆ ಅಂಚೆ ಕಚೇರಿಯಲ್ಲಿ ಸಿಗುವ ಕವರ್​ಗಳಲ್ಲಿಯೂ ಸಹ ಮತದಾನ ಜಾಗೃತಿ ಮೂಡಿಸುವ ಬರಹಗಳನ್ನು ಹಾಕಲಾಗಿದೆ.

ನಿತ್ಯ 500ಕ್ಕೂ ಹೆಚ್ಚು ಪೋಸ್ಟ್​ಗಳು ಮತ ಜಾಗೃತಿ ಮೂಡಿಸುತ್ತಿವೆ. ಮತದಾನ ದಿನದವರೆಗೂ ಈ ರೀತಿ ಮತಜಾಗೃತಿ ಮೂಡಿಸಲು ಅಂಚೆ ಇಲಾಖೆ ಮುಂದಾಗಿದೆ.

ಈ ಬಾರಿ ವೈಯಕ್ತಿಕ ಹಾಗೂ ಸರ್ಕಾರಿ, ಖಾಸಗಿ ಕಚೇರಿಗಳು, ಬ್ಯಾಂಕ್​ಗಳು ಸೇರಿದಂತೆ ಎಲ್ಲ ಪೋಸ್ಟ್​ಗಳ ಮಾದರಿಗಳಲ್ಲಿಯೂ ಮತಜಾಗೃತಿ ಮೂಡಿಸುತ್ತಿರುವುದು ವಿಶೇಷ.

ಪ್ರತಿ ಮನೆಗೆ ಹಾಲು ಸರಬರಾಜು ಮಾಡುವ ಕೆಎಂಎ್​ ಇದೀಗ ಮತದಾನದ ಮಹತ್ವ ಸಾರುವ ಮೂಲಕ ಪ್ರಜಾಪ್ರಭುತ್ವದ ನತೆ ತಿಳಿಸುತ್ತಿದೆ. ಕೆಎಸ್​ಆರ್​ಟಿಸಿ ಬಸ್​ ಟಿಕೆಟ್​ಗಳ ಮೇಲೂ ಮತ ಜಾಗೃತಿ ಮೂಡಿಸಲಾಗುತ್ತಿದೆ. ನರೇಗಾ ಕಾಮಗಾರಿಗಳು ನಡೆಯುತ್ತಿರುವ ಸ್ಥಳಗಳಲ್ಲಿಯೂ ಜಿಲ್ಲಾ ಪಂಚಾಯಿತಿ ಕೂಡ ಮತಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕೂಲಿಕಾರರ ಬಳಿ ಜಾಗೃತಿ ಗೀತೆ ಹಾಡುವುದು, ಪ್ರತಿಜ್ಞಾ ವಿಧಿ ಬೋಧಿಸುವ ಮೂಲಕ ಮತಜಾಗೃತಿ ಮೂಡಿಸಲಾಗುತ್ತಿದೆ.