ಯಲಬುರ್ಗಾ ತಾಲೂಕಿನ ಕರಮುಡಿಯಲ್ಲಿ ಬೈಕ್ ರ್ಯಾಲಿ ಮೂಲಕ ಮತದಾರರಲ್ಲಿ 2ನೇ ಹಂತದ ಮತದಾನ ಜಾಗೃತಿ ಮೂಡಿಸಲಾಯಿತು. ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಗ್ರಾಪಂ ಕಾರ್ಯದರ್ಶಿ ಮೆಹಬೂಬ್ ಹಿರೇಮನಿ, ಡಿಇಒ ಮಂಜುನಾಥ ನಿಂಗೋಜಿ ಇತರರಿದ್ದರು. 
ಜಿಲ್ಲೆ

ಕರಮುಡಿಯಲ್ಲಿ ಮತದಾನ ಜಾಗೃತಿ

ರುದ್ರಪ್ಪ ವಾಲಿ

ಯಲಬುರ್ಗಾ: ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡಬೇಕು ಎಂದು ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ ಹೇಳಿದರು.ತಾಲೂಕಿನ ಕರಮುಡಿ ಗ್ರಾಮದಲ್ಲಿ ಗ್ರಾಪಂ, ಚುನಾವಣಾ ಆಯೋಗ, ಸ್ವೀಪ್ ಸಮಿತಿ ಬುಧವಾರ ಆಯೋಜಿಸಿದ್ದ 2ನೇ ಹಂತದ ಮತದಾನ ಜಾಗೃತಿ ಜಾಥಾ, ಬೈಕ್ ರ್ಯಾಲಿ ಮೂಲಕ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಬಾರಿ ವೋಟ್ ಮಾಡಬೇಕು

ಯಾರೂ ಮತದಾನದಿಂದ ತಪ್ಪಿಸಿಕೊಳ್ಳಬಾರದು. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತದಾನ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ. ಕಳೆದ ಬಾರಿ ಮತದಾನದಿಂದ ತಪ್ಪಿಸಿಕೊಂಡವರು ಈ ಬಾರಿ ವೋಟ್ ಮಾಡಬೇಕು ಎಂದರು.

ಈ ವೇಳೆ ಕಳೆದ ಬಾರಿ ಕಡಿಮೆ ಮತದಾನವಾದ ವಾರ್ಡ್‌ಗಳ ಮನೆಗೆ ಬಿಎಲ್‌ಒ, ಗ್ರಾಪಂ ಸಿಬ್ಬಂದಿ ತೆರಳಿ ಕಡ್ಡಾಯ ಮತದಾನ ಮಾಡುವಂತೆ ಅರಿವು ಮೂಡಿಸಿದರು.
ತಾಪಂ ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಗ್ರಾಪಂ ಕಾರ್ಯದರ್ಶಿ ಮೆಹಬೂಬ್ ಹಿರೇಮನಿ, ಡಿಇಒ ಮಂಜುನಾಥ ನಿಂಗೋಜಿ, ಕರವಸೂಲಿಗಾರ ಉಮೇಶ ಇತರರಿದ್ದರು.