ಜಿಲ್ಲೆ

ಮಾಲ್ ಗಳಲ್ಲಿ ಮತದಾನ ಜಾಗೃತಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ನಗರದ ವಿವಿಧ ಮಾಲ್ ಹಾಗೂ ಸೂಪರ್ ಮಾರ್ಕೆಟ್​ಗಳಲ್ಲಿ ಶುಕ್ರವಾರದಂದು ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮತದಾನದ ಕುರಿತು ಸೆಲ್ಪೀ ಪಾಯಿಂಟ್ ಹಾಗೂ ಸ್ಟಾ್ಯಂಡ್​ಡಗಳನ್ನು ವಿವಿಧ ಮಾಲ್ ಹಾಗೂ ಸೂಪರ್ ಮಾರ್ಕೆಟ್​ನ ಕಾಂಪ್ಲೆಕ್ಸ್​ಗಳಲ್ಲಿ ಅಳವಡಿಸಲಾಗಿದ್ದು, ಜನರು ಸೆಲ್ಪಿ ತೆಗೆದುಕೊಳ್ಳುತಿದ್ದಾರೆ ಪಾಲಿಕೆ ಆಯುಕ್ತ ಈಶ್ವರ ಉಳಾಗಡ್ಡಿ ಅವರು ತಿಳಿಸಿದ್ದಾರೆ.

ಮತದಾನದ ಕುರಿತು ಈ ಸೆಲ್ಪಿ ಪಾಯಿಂಟ್​ಗಳ ಮೂಲಕ ವಿನೂತನವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯ 82 ವಾರ್ಡ್​ಗಳಲ್ಲಿ ಮತದಾನ ಪ್ರಚಾರಕ್ಕಾಗಿ ಟ್ಯಾಬ್ಲೊ ವಾಹನ ಸಂಚರಿಸಲಿದೆ, ಇದರ ಜತೆಗೆ ಎಲ್.ಇ.ಡಿ ವಾಹನ ಸಹ ಎಲ್ಲ ವಾರ್ಡ್​ಗಳಲ್ಲಿ ಸಂಚರಿಸಲಿದೆ.

ಸ್ಮಾರ್ಟ್ ಸಿಟಿ ಯೋಜನೆಡಿಯ 36 ಡಿಜಿಟಲ್ ಡಿಸ್​ಪ್ಲೇ ಬೋರ್ಡ್​ಗಳಲ್ಲಿ ಮತದಾನ ಜಾಗೃತಿ ಕುರಿತು ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ. 15 ಹೋಲ್ಡಿಂಗ್ಸ್​ಗಳನ್ನು ಅಳವಡಿಸಲಾಗಿದೆ, ನಿತ್ಯ ಮನೆ, ಮನೆಗೆ ಹೋಗಿ ಕಸ ಹೊತ್ತೊಯ್ಯುವ ವಾಹನಗಳಲ್ಲಿ ಮತದಾನ ಜಾಗೃತಿ ಜಿಂಗಲ್ಸ್​ಗಳನ್ನು ಅಳವಡಿಸಲಾಗಿದೆ ಎಂದು ಆಯುಕ್ತ ಈಶ್ವರ ಉಳಾಗಡ್ಡಿ ತಿಳಿಸಿದ್ದಾರೆ.