ಜಿಲ್ಲೆ

ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್, ಶ್ರೀಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನಿಂದ ಮತದಾನ ಜಾಗೃತಿ ಅಭಿಯಾನ

ಮೈಸೂರು: ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್, ಶ್ರೀಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನಿಂದ ನಗರದಲ್ಲಿ ಬುಧವಾರ ಮತದಾನ ಜಾಗೃತಿ ಅಭಿಯಾನ ಆಯೋಜಿಸಲಾಗಿತ್ತು.
ವಿಜಯನಗರದ ಒಂದನೇ ಹಂತದಲ್ಲಿರುವ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನಿಂದ ಆರಂಭಗೊಂಡ ಮತದಾನ ಜಾಗೃತಿ ಅಭಿಯಾನಕ್ಕೆ ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ನಿರ್ದೇಶಕ ಡಾ.ನಾಗರಾಜ್ ವಿ. ಬೈರಿ ಚಾಲನೆ ನೀಡಿದರು.
ಮತದಾನ ನಮ್ಮೆಲ್ಲರ ಹಕ್ಕು. ಹಾಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡುವುದರ ಮೂಲಕ ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಯುವಶಕ್ತಿಯಾಗಿರುವ ಮತದಾರರೇ ಪ್ರಮಾಣ ಶೇ. 65 ರಷ್ಟು ಇದ್ದು, ಎಲ್ಲರೂ ತಪ್ಪದೆ ಮತದಾನ ಮಾಡುವುದರ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ. ಹಿರಿಯರನ್ನು ಮತಗಟ್ಟೆಗೆ ಕರೆದುಕೊಂಡು ಹೋಗಿ ಅವರೂ ಹಕ್ಕು ಚಲಾಯಿಸುವಂತೆ ಮಾಡಿ ಎಂದು ಹೇಳಿದರು.
ಶ್ರೀಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷರೂ ಅದ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಜೆ.ಶಶಿಧರ್ ಪ್ರಸಾದ್, ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಶಿವಸುಂದರ್ ಸತ್ಯೇಂದ್ರ, ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಾನಸಾ, ಶ್ರೀಕುವೆಂಪು ವಿದ್ಯಾವರ್ಧಕ ಪಿಯು ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್, ಅಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಜಿಲ್ಲಾ ಪ್ರಾಂತಪಾಲ ಬಾಲಕೃಷ್ಣರಾಜು, ಸಿರಿಬಾಲು, ಒಂದನೇ ಪ್ರಾಂತಪಾಲ ವೆಂಕಟೇಶ್, ಎರಡನೇ ಪ್ರಾಂತಪಾಲ ಮಹಾಬಲೇಶ್ವರ ಬೈರಿ, ಮೂರನೇ ಪ್ರಾಂತಪಾಲ ಎಂ.ಎಸ್ ಸಂತೋಷ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಎನ್.ಗಂಗಾಧರಪ್ಪ, ಜಿಲ್ಲಾ ಕೋಶಾಧ್ಯಕ್ಷ ಕೃಷ್ಣಜಿ ರಾವ್, ಜಿಲ್ಲಾ ಪಿಆರ್‌ಒ ಎನ್.ಬೆಟ್ಟೆಗೌಡ ಇತರರು ಇದ್ದರು.