ರಾಯಚೂರು: ಗೆಲ್ಲಬಹುದಾದ ಅಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವ ಬದಲು ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿದಾಗ ಮಾತ್ರ ನಾವು ಹಾಕುವ ಮತಕ್ಕೆ ಮೌಲ್ಯ ಬರುತ್ತದೆ ಎಂದು ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಡಾ.ಚಂದ್ರಗಿರೀಶ್ ಹೇಳಿದರು.
ಸ್ಥಳೀಯ ಸಲಾರ್ ಂಕ್ಷನ್ ಹಾಲ್‌ನಲ್ಲಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಪರ್ಯಾಯ ರಾಜಕೀಯಕ್ಕಾಗಿ ಜಾಗೃತ ಮತದಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತಿ, ಮತ ಸೇರಿದಂತೆ ಎಲ್ಲ ಮಿಥ್ಯಗಳನ್ನು ಮೀರಿ ಜನಪರವಾಗಿ ನಿಲ್ಲುವ ವ್ಯಕ್ತಿಗೆ ಮತ ಚಲಾಯಿಸಬೇಕು ಎಂದರು.
ರಾಜಕೀಯ ಎನ್ನುವುದು ಉದಾತ್ತವಾದುದು. ರಾಜಕೀಯ ಹೊಲಸು ಎಂದು ದೂರ ಉಳಿದರೆ ಭ್ರಷ್ಟರಿಗೆ ದೇಶವನ್ನು ಹಾಳು ಮಾಡಲು ಬಿಟ್ಟಂತಾಗುತ್ತದೆ. ನಮ್ಮ ಬದುಕಿನ ಆಗು ಹೋಗುಗಳಿಗೆ ಹಾಗೂ ಸಮಸ್ಯೆಗಳಿಗೆ ಈಗಿರುವ ರಾಜಕೀಯ ವ್ಯವಸ್ಥೆಯೇ ಕಾರಣವಾಗಿದೆ.
ಸೋಲು ಗೆಲುವಿನ ಕೆಸರಲ್ಲಿ ಸಿಲುಕಿ ವಾಸ್ತವದಲ್ಲಿ ಪ್ರಜ್ಞಾವಂತಿಕೆಯನ್ನು ನಾವು ಮರೆತು ಬಿಡುತ್ತೇವೆ. ಆದ್ದರಿಂದ ಜನಪರ ಅಭ್ಯರ್ಥಿಯ ಪರ ನಿಲ್ಲುವ ಹೊರತು ಬೇರಾವ ಅನ್ಯ ಆಯ್ಕೆಗಳು ಜಾಗೃತ ಮತದಾರನ ಮುಂದೆ ಇರಬಾರದು ಎಂದು ಡಾ.ಚಂದ್ರಗಿರೀಶ್ ಹೇಳಿದರು.
ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯ ಮಹತ್ವವೇನು. ಯಾವ ಪಕ್ಷದ ಅಭ್ಯರ್ಥಿಗೆ ಯಾವ ಉದ್ದೇಶದಿಂದ ಮತ ಹಾಕಬೇಕು ಎನ್ನುವುದು ಬಹಳ ಮುಖ್ಯವಾಗಿದೆ. ಎಲ್ಲ ಪಕ್ಷಗಳು ಯುವಜನ, ವಿದ್ಯಾರ್ಥಿ, ಮಹಿಳಾ ವಿರೋಯಾಗಿವೆ ಎಂದರು.
ಎಐಎಂಎಸ್‌ಎಸ್ ಜಿಲ್ಲಾ ಸಂಚಾಲಕಿ ಸರೋಜಾ ಗೋನ್ವಾರ ಮತನಾಡಿ, ಪ್ರಸ್ತುತ ದಿನಮಾನದಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆದರೆ ಯಾವ ಪಕ್ಷ ಅಕಾರಕ್ಕೆ ಬಂದರೂ ಅಪರಾಗಳಿಗೆ ಶಿಕ್ಷೆಯಾಗುತ್ತಿಲ್ಲ. ಇಂತಹ ಮಹಿಳಾ ವಿರೋ ಪಕ್ಷಗಳಿಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ವಿನೋದಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಬಸವರಾಜ, ಜಿಲ್ಲಾ ಉಪಾಧ್ಯಕ್ಷ ಪೀರ್‌ಸಾಬ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.