ಇಳಕಲ್ಲ ನಗರಸಭೆ ಉಪಚುನಾವಣೆಯಲ್ಲಿ ಮತದಾನ ಮಾಡಲು ಸರದಿಯಲ್ಲಿ ನಿಂತು ಮತದಾನ ಚಲಾಯಿಸಿದ ಮತದಾರರು. 
ಜಿಲ್ಲೆ

ಸರದಿಯಲ್ಲಿ ನಿಂತು ಮತ ಚಲಾಯಿಸಿದ ಮತದಾರರು

Vijayapura - Desk - Gurappa Lokuri

ಇಳಕಲ್ಲ(ಗ್ರಾ): ಇಲ್ಲಿನ ನಗರಸಭೆಯ 19ನೇ ವಾರ್ಡಿನ ಉಪಚುನಾವಣೆಯಲ್ಲಿ ಮತದಾರರು ಸರದಿಯಲ್ಲಿ ನಿಂತು ಶನಿವಾರ ಮತ ಚಲಾಯಿಸಿದರು.

1364 ಮತದಾರರನ್ನು ಹೊಂದಿರುವ ಇಲ್ಲಿನ ವಾರ್ಡ್‌ನಲ್ಲಿ ಬೆಳಗ್ಗೆ ನಿಧಾನಗತಿಯಲ್ಲಿ ಮತದಾನವಾದರೆ ಬಳಿಕ ಬಿರುಸುಗೊಂಡಿತು. ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದ್ದು, ಕಾಂಗ್ರೆಸ್ ಪಕ್ಷದ ರತ್ನಾ ತಳವಾರ, ಬಿಜೆಪಿಯ ನಾಗೇಶ ಮೇದಾರ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯ ಶ್ರೀನಿವಾಸ ಸುರಪುರ ನಿಧನದಿಂದಾಗಿ ಉಪಚುನಾವಣೆ ನಡೆದಿದೆ.

ಶತಾಯುಷಿ ಮಹಿಳೆಯೊಬ್ಬರು ವೀಲ್‌ಚೇರ್‌ದಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ಗಮನಸೆಳೆದರು.