ಜಿಲ್ಲೆ

ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ

Mangaluru - Hariprasad Rai



ಮಂಗಳೂರು : ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ವೇಳಾಪಟ್ಟಿ ಹೊರಡಿಸಿದ್ದು.
್ಞನ.28ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ನ. 9, 10 ಹಾಗೂ 23,24ರಂದು ವಿಶೇಷ ನೋಂದಣಿ ಅಭಿಯಾನ
ಆಯಾ ಮತಗಟ್ಟೆಗಳಲ್ಲಿ ನಡೆಯಲಿದೆ. ಡಿ.24ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ನಡೆಯಲಿದ್ದು, ಜನವರಿ 6ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.
ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ : ಬೆಳ್ತಂಗಡಿ - 232269, ಮೂಡುಬಿದಿರೆ -210211, ಮಂಗಳೂರು ನಗರ ಉತ್ತರ- 256112, ಮಂಗಳೂರು ನಗರ ದಕ್ಷಿಣ- 253407, ಮಂಗಳೂರು- 209955, ಬಂಟ್ವಾಳ- 229236, ಪುತ್ತೂರು-216821, ಸುಳ್ಯ- 209261
ದ.ಕ. ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 51815 ಮತದಾರರ ಸೇರ್ಪಡೆಯಾಗಿದೆ. 22948 ತೆಗೆದು ಹಾಕಿದ್ದು ಹಾಗೂ 28827 ಹೆಸರು ತಿದ್ದುಪಡಿ ಮಾಡಲಾಗಿದೆ. 18ರಿಂದ 19ರ ಹರೆಯದ 19905 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. 85 ವರ್ಷ ಮೇಲ್ಪಟ್ಟ 23894 ಮತದಾರರಿದ್ದಾರೆ. 14268 ವಿಕಲಚೇತನ , 258 ಆನಿವಾಸಿ ಭಾರತೀಯ ಮತ್ತು 514 ಸೇವಾ ಮತದಾರರಿದ್ದಾರೆ .
ಜ.1, ಏ.1, ಜು.1, ಅ. 1 ಈ ನಾಲ್ಕು ದಿನಗಳಂದು 18 ವರ್ಷ ತುಂಬಿರುವ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನವೆಂಬರ್ 9,10,23,24 ರಂದು ಬೆಳಗ್ಗೆ 10ರಿಂದ ಸಾಯಂಕಾಲ 5ರವರೆಗೆ ವಿಶೇಷ ನೋಂದಣಿ ಕಾರ್ಯಕ್ರಮ
ನಡೆಯಲಿದ್ದು ಎಲ್ಲ ಅರ್ಹ ಮತದಾರರು ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಬಹುದು.
ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಮತದಾರರ ಪಟ್ಟಿ ಪರಿಷ್ಕರಣೆ ಪರಿಣಾಮಕಾರಿಯಾಗಲು ಎಲ್ಲಾ ರಾಜಕೀಯ ಪಕ್ಷಗಳು ಪ್ರತಿ ಬೂತ್ ಮಟ್ಟದಲ್ಲಿ ಬಿಎಲ್‌ಎ ಗಳನ್ನು ನೇಮಕಾತಿ ಮಾಡಬೇಕೆಂದು ದ.ಕ.ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
......................................